ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ಬಿಜೆಪಿ (BJP) ಹೀನಾಯವಾಗಿ ಸೋತ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ (Basavaraj Bommai) ರಾಜೀನಾಮೆ ನೀಡಿದ್ದಾರೆ.
ಇಂದು ರಾತ್ರಿ ರಾಜ ಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿಯಾದ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಸೋತಿದ್ದು ಹೇಗೆ? – ಕೊನೆ ದಿನ ನಡೆದಿದ್ದು ಏನು?
Advertisement
Advertisement
ಯಡಿಯೂರಪ್ಪರ (Yediyurappa) ನಿವೃತ್ತಿ ಘೋಷಣೆಯಿಂದ ಸಿಎಂ ಪಟ್ಟಕ್ಕೇರಿದ್ದ ಬೊಮ್ಮಾಯಿ 2021ರ ಜುಲೈ 26 ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು.
Advertisement
ಬಯಸದೇ ಬಂದ ಭಾಗ್ಯದಂತೆ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದ ಬೊಮ್ಮಾಯಿ ಇಂದು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ 65, ಕಾಂಗ್ರೆಸ್ 136, ಜೆಡಿಎಸ್ 19, ಇತರರು 04 ಸ್ಥಾನಗಳನ್ನು ಗೆದ್ದಿದ್ದಾರೆ.