ಬೆಂಗಳೂರು: ರಮೇಶ್ ಜಾರಕಿಹೊಳಿ (Ramesh Jarakiholi) ‘ಸಿಡಿ’ಮದ್ದಿನ ಯುದ್ಧ ಚುನಾವಣೆ ತನಕ ಫಿಕ್ಸ್ ಎನ್ನಲಾಗಿದೆ. ಡಿಕೆಶಿಗೆ ಮೂರು ತಿಂಗಳ ಸಿಡಿ ಅಸ್ತ್ರದ ಕಾಟ ಕೊಡಲು ಪ್ಲ್ಯಾನ್ ನಡೆದಿದ್ದು, ಅಮಿತ್ ಶಾ (Amit Shah) ಕೂಡ ಸಿಡಿ ಪ್ರಚಾರ ಯುದ್ಧಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತಾ ದೆಹಲಿಯಲ್ಲಿ (New Delhi) ಬಿಸಿ ಬಿಸಿ ಚರ್ಚೆ ಆಗುತ್ತಿದೆ. ದೆಹಲಿಯಲ್ಲಿ ಅಮಿತ್ ಶಾ ಮುಂದೆ ನಡೆದ ಮಾತುಕತೆಯ ಎಕ್ಸ್ಕ್ಲೂಸಿವ್ ಡಿಟೇಲ್ಸ್ ಪಬ್ಲಿಕ್ ಟಿವಿಗೆ (Public TV) ಲಭ್ಯವಾಗಿದೆ.
ದೆಹಲಿಯಲ್ಲಿ ರಮೇಶ್ ಜಾರಕಿಹೊಳಿಗೆ ಸಮಾಧಾನ ಸೂತ್ರ ಸಿದ್ಧಪಡಿಸಿ ಕಳುಹಿಸಿದ್ದಾರೆ ಅಮಿತ್ ಶಾ. ಕೇಸ್ ಲೀಗಲ್ ಫಿಟ್ ಆಗಿರಬೇಕು. ಮಾರ್ಚ್ ತನಕ ಕಾಯಬೇಕು. ಏಕಾಏಕಿ ಸಿಬಿಐ ತನಿಖೆಗೆ ಕೊಡಿ ಎಂದರೆ ಆಗಲ್ಲ, ವೇಯ್ಟ್! ಮಾರ್ಚ್ ತನಕ ಕಾಯೋಣ, ಚುನಾವಣೆ ಕೂಡ ಹತ್ತಿರ ಬರುತ್ತೆ ಆಗ. ನಾವು ಕೂಡ ಲೀಗಲ್ ಓಪಿನಿಯನ್ ಕೇಳುತ್ತೇವೆ ಬಳಿಕ ಮುಂದುವರಿಯೋಣ ಎಂದು ರಮೇಶ್ ಜಾರಕಿಹೊಳಿಗೆ ಅಮಿತ್ ಶಾ ಸಮಾಧಾನದ ಮಾತು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ ಡಿಕೆಶಿ ವಿರುದ್ಧ ಪೊಲಿಟಿಕಲ್ ಚಾರ್ಚ್ಶೀಟ್ ದಾಳಿ ಬಗ್ಗೆ ಬೇಡ ಎನ್ನದ ಶಾ, ರಾಜಕೀಯ ಗೇಮ್ ಪ್ಲ್ಯಾನ್ ಮಾಡಿದ್ದಾರಂತೆ.
Advertisement
Advertisement
ಆದರೆ ಡಿಕೆಶಿ ವಿರುದ್ಧ ಪೊಲಿಟಿಕಲ್ ಫೈಟ್ ಏನಿದೆಯೋ ಅದನ್ನ ಮಾಡಿ, ಪಾರ್ಟಿ ಮಧ್ಯಪ್ರವೇಶ ಮಾಡಲ್ಲ. ನಮ್ಮ ಪಾರ್ಟಿಯ ಕೆಲವರು ನಿಮ್ಮ ಜೊತೆಗೆ ನಿಲ್ಲಬಹುದು, ನಾವು ಬೇಡ ಎನ್ನಲ್ಲ. ಆದರೆ ಸಿಬಿಐ ತನಿಖೆ ಬಗ್ಗೆ ನಾವು ಮಾರ್ಚ್ನಲ್ಲಿ ಡಿಸೈಡ್ ಮಾಡೋಣ ಎಂದು ಶಾ ಹೇಳಿದ್ದಾರಂತೆ. ಇನ್ನೂ ಅಮಿತ್ ಶಾ ಮಾರ್ಚ್ ಸುಳಿವಿಗೆ ಖುಷಿಯಾಗಿಯೇ ಆಯ್ತು ಸರ್ ಎಂದಿದ್ದಾರಂತೆ ರಮೇಶ್ ಜಾರಕಿಹೊಳಿ. ಇದನ್ನೂ ಓದಿ: ಮುತಾಲಿಕ್ ವಿರುದ್ಧ ಅಭ್ಯರ್ಥಿ ಹಾಕಿದ್ರೆ ಸಿ.ಟಿ.ರವಿ ವಿರುದ್ಧವೂ ಅಭ್ಯರ್ಥಿ : ಶ್ರೀರಾಮಸೇನೆ ಎಚ್ಚರಿಕೆ
Advertisement
Advertisement
ಹಾಗಾಗಿ ಚುನಾವಣೆ ಮುಗಿಯುವ ತನಕ ಡಿಕೆಶಿ ವಿರುದ್ಧ ಮುಗಿಬೀಳಲು ರಮೇಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿದ್ದು, ಡಿಕಶಿಗೆ ಫೆಬ್ರವರಿ ಟು ಏಪ್ರಿಲ್ ಕಡೆ ತನಕವೂ ಸಿಡಿ ಕಾಟ ಬಹುತೇಕ ಫಿಕ್ಸ್ ಆಗುತ್ತಾ!? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ 2 ವಿಕೆಟ್ ಪತನ- ಕಾಂಗ್ರೆಸ್ ಸೇರ್ತಾರಾ ಶಿವಲಿಂಗೇಗೌಡ, ಎಟಿಆರ್?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k