ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗಿದೆ. ಘಟಾನುಘಟಿ ನಾಯಕರು ಆಯಾ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್.ಅಶೋಕ್ (R Ashoka), ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara), ಮಾಗಡಿಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಹಾಲಿ ಶಾಸಕ ಮಂಜುನಾಥ್ (Majunath) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆ ವೇಳೆ ಎಲ್ಲಾ ನಾಯಕರು ತಮ್ಮ ತಮ್ಮ ಆಸ್ತಿ ವಿವರಗಳನ್ನ ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ್ದಾರೆ. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?
Advertisement
ಕನಕಪುರ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧೆ ಮಾಡ್ತಿರೋ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಬಿಎಸ್ಸಿ ಪದವೀಧರರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ., ಪತ್ನಿ ಆಸ್ತಿ ಮೌಲ್ಯ 11.50 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 70.38 ಕೋಟಿ ರೂ. ಇದೆ. ಅಶೋಕ್ ಅವರ ಒಟ್ಟು ಚರಾಸ್ತಿ 2.18 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 1.16 ಕೋಟಿ ರೂ., ಅವಿಭಜಿತ ಕುಟುಂಬದ ಚರಾಸ್ತಿ 8.96ಕೋಟಿ ರೂ. ಇದೆ. ಆರ್. ಅಶೋಕ್ ಸ್ಥಿರಾಸ್ತಿ 3.10 ಕೋಟಿ ರೂ., ಪತ್ನಿ ಹೆಸರಿನ ಸ್ಥಿರಾಸ್ತಿ 10.44 ಕೋಟಿ ರೂ., ಅವಿಭಜಿತ ಕುಟುಂಬದ ಸ್ಥಿರಾಸ್ತಿ 61.42 ಕೋಟಿ ರೂ. ಇದೆ. ಅಶೋಕ್ ಹೆಸರಲ್ಲಿ ಒಟ್ಟು ಸಾಲ, 97.78 ಲಕ್ಷ ಹಾಗೂ ಪತ್ನಿ ಹೆಸರಲ್ಲಿ 64 ಲಕ್ಷ ಸಾಲ ಇದ್ದು, ಅವಿಭಜಿತ ಕುಟುಂಬದ ಸಾಲ 7.95 ಕೋಟಿ ರೂ. ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅಶೋಕ್ ವಾರ್ಷಿಕ ಆದಾಯ 18.44 ಲಕ್ಷ ರೂ. ಆಗಿದ್ದು ಆದಾಯ ಮೂಲ ಕೃಷಿ ಮತ್ತು ಬಾಡಿಗೆ ಎಂದು ತೋರಿಸಲಾಗಿದೆ. ಅಶೋಕ್ ಹೆಸರಿನಲ್ಲಿ 400 ಗ್ರಾಂ ಚಿನ್ನ ಹಾಗೂ 12 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿ 617 ಗ್ರಾಂ ಚಿನ್ನ, 11 ಕೆ.ಜಿ ಬೆಳ್ಳಿ, 17.5ಲಕ್ಷ ಮೌಲ್ಯ ಡೈಮಂಡ್ ನೆಕ್ಲಸ್ ಇದೆ. 2 ಇನ್ನೋವಾ ಕಾರುಗಳನ್ನ ಆರ್.ಅಶೋಕ್ ಹೊಂದಿದ್ದಾರೆ. ಅಶೋಕ್ ವಿರುದ್ಧ ಎಸಿಬಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಮತ್ತೊಂದು ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ
Advertisement
ಸಿ.ಪಿ.ಯೋಗೇಶ್ವರ್ ಆಸ್ತಿ ವಿವಿರ:
ಯೋಗೇಶ್ವರ್ ಬಿಎಸ್‌ಸಿ ಪದವೀಧರ.
ಒಟ್ಟು ಸ್ಥಿರಾಸ್ತಿ/ಚರಾಸ್ತಿ ಮೌಲ್ಯ: 30.68 ಕೋಟಿ
ಯೋಗೇಶ್ಚರ್ ಒಟ್ಟು ಚರಾಸ್ತಿ ಮೌಲ್ಯ: 5.09 ಕೋಟಿ
ಪತ್ನಿ ಹೆಸರಲ್ಲಿ ಚರಾಸ್ತಿ ಮೌಲ್ಯ: 2.43 ಕೋಟಿ
ಯೋಗೇಶ್ವರ್ ಸ್ಥಿರಾಸ್ತಿ ಮೌಲ್ಯ: 25.59 ಕೋಟಿ
ಪತ್ನಿ ಹೆಸರಿನ ಸ್ಥಿರಾಸ್ತಿ ಮೌಲ್ಯ: 21.40 ಕೋಟಿ
ಸಿಪಿವೈ ವಾರ್ಷಿಕ ಆದಾಯ: 41 ಲಕ್ಷ
ಸಿಪಿವೈ ಒಟ್ಟು ಸಾಲ: 13.12 ಕೋಟಿ
ಪತ್ನಿ ಹೆಸರಿನಲ್ಲಿರುವ ಸಾಲ: 3.20 ಕೋಟಿ
ಸಿಪಿವೈ ಆದಾಯ ಮೂಲ: ಬಾಡಿಗೆ ಮತ್ತು ವ್ಯವಹಾರ
ಸಾರ್ವಜನಿಕರು ಮತ್ತು ಇತರರಿಂದ ಪಡೆದಿರುವ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿ, 250 ಗ್ರಾಂ ಚಿನ್ನಾಭರಣ ಇದೆ.
ಪತ್ನಿ ಬಳಿ 1.5ಕೆ.ಜಿ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಇದೆ.
ಸಿಪಿವೈ ಸ್ವಂತ ಕಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಯೋಗೇಶ್ವರ್ ವಿರುದ್ಧ 10 ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
Advertisement
ಹೆಚ್.ಸಿ ಬಾಲಕೃಷ್ಣ:
ವಿದ್ಯಾರ್ಹತೆ: ಎಂಬಿಬಿಎಸ್ (ಅಪೂರ್ಣ ಪದವಿ)
ಒಟ್ಟು ಆಸ್ತಿ ಮೌಲ್ಯ: 10.39 ಕೋಟಿ
ಬಾಲಕೃಷ್ಣ ಸ್ಥಿರಾಸ್ತಿ: 9.93 ಕೋಟಿ
ಪತ್ನಿ ಹೆಸರಲ್ಲಿ ಸ್ಥಿರಾಸ್ತಿ: 23.52 ಕೋಟಿ
ಬಾಲಕೃಷ್ಣ ಒಟ್ಟು ಚರಾಸ್ತಿ: 46.75 ಲಕ್ಷ
ಪತ್ನಿ ಹೆಸರಿನ ಚರಾಸ್ತಿ: 1.20 ಕೋಟಿ
ಬಾಲಕೃಷ್ಣ ಒಟ್ಟು ಸಾಲ: 1.23 ಕೋಟಿ
ಪತ್ನಿ ಹೆಸರಲ್ಲಿನಲ್ಲಿರುವ ಸಾಲ: 11.13 ಕೋಟಿ
ವಾರ್ಷಿಕ ಆದಾಯ: 7.5 ಲಕ್ಷ
ಆದಾಯ ಮೂಲ: ವ್ಯವಸಾಯ
ಬಾಲಕೃಷ್ಣ ಬಳಿ ಸ್ವಂತ ಕಾರು ಇಲ್ಲ, ಪತ್ನಿ ಬಳಿ 3 ಕಾರು ಇದೆ.
ಬಾಲಕೃಷ್ಣ 475 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ, 70 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ.
ಪತ್ನಿ ಬಳಿ 1.113 ಕೆಜಿ ಚಿನ್ನ, 4 ಕೆಜಿ ಬೆಳ್ಳಿ ಇದೆ.
ಇನ್ನೂ ಬಾಲಕೃಷ್ಣ ವಿರುದ್ಧ ಕುದೂರು, ರಾಮನಗರ ಗ್ರಾಮಾಂತರ ಠಾಣೆಗಳಲ್ಲಿ ಎರಡು ಪ್ರಕರಣ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸಂಬಂಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
Advertisement
ಎ.ಮಂಜುನಾಥ್ ಆಸ್ತಿ ವಿವರ:
ಎ.ಮಂಜುನಾಥ್ ಬಿಬಿಎಂ ಪದವೀಧರ.
ಒಟ್ಟು ಆಸ್ತಿ ಮೌಲ್ಯ: 10.65 ಕೋಟಿ
ಮಂಜುನಾಥ್ ಚರಾಸ್ತಿ ಮೌಲ್ಯ: 1.02 ಕೋಟಿ.
ಪತ್ನಿ ಹೆಸರಿನ ಚರಾಸ್ತಿ: 55 ಲಕ್ಷ
ಮಂಜುನಾಥ್ ಸ್ಥಿರಾಸ್ತಿ: 9.45 ಕೋಟಿ
ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ಥಿ: 10.88 ಕೋಟಿ
ಮಂಜುನಾಥ್ ಹೆಸರಲ್ಲಿರುವ ಸಾಲ: 1.18 ಕೋಟಿ
ಪತ್ನಿ ಹೆಸರಲ್ಲಿರುವ ಸಾಲ: 4.15 ಕೋಟಿ
ವಾರ್ಷಿಕ ಆದಾಯ: 13.26 ಲಕ್ಷ
ಪತ್ನಿ ಹೆಸರಲ್ಲಿ 3 ವೈನ್ ಸ್ಟೋರ್ ಇದೆ
ಮಂಜುನಾಥ್ ಬಳಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹೊಂದಿದ್ದಾರೆ.
ಪತ್ನಿ ಬಳಿ 400 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಇದೆ.
ಮಂಜುನಾಥ್ ಹೆಸರಲ್ಲಿ 5 ಕಾರು, ಪತ್ನಿ ಹೆಸರಲ್ಲಿ 2 ಕಾರು ಇದೆ.
ಅಲ್ಲದೇ ಮಂಜುನಾಥ್ ವಿರುದ್ಧ ಮಾಗಡಿ ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.