ರಾಯಚೂರು: ಜಿಲ್ಲೆಯ ಮಸ್ಕಿ (Maski) ಕ್ಷೇತ್ರದಲ್ಲಿ ಈ ಬಾರಿ ಅವಳಿ, ಜವಳಿ ಅನ್ನುವಷ್ಟರ ಮಟ್ಟಿಗೆ ಒಂದೇ ಹೋಲಿಕೆಯ ಇಬ್ಬರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್‌ರನ್ನೇ (Pratap Gowda Patil) ಹೋಲುವ ರೀತಿಯ ಫೋಟೋವನ್ನು ನೀಡಿ ಪಕ್ಷೇತರ ಅಭ್ಯರ್ಥಿ ಮತದಾರರಲ್ಲಿ ಗೊಂದಲ ಸೃಷ್ಟಿಸಿದ್ದಾರೆ.
35 ವರ್ಷದ ಪಕ್ಷೇತರ ಅಭ್ಯರ್ಥಿ ಈಶಪ್ಪ, 68 ವರ್ಷದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹೋಲಿಕೆ ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈಶಪ್ಪ ಅಂತಲೇ ಹೆಸರು ಇದೆ. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಈಶಪ್ಪ ಗೌಡ ಪಾಟೀಲ್ ಎಂದು ಹಾಕಿಸಿಕೊಂಡಿದ್ದಾನೆ. ಹೆಸರು ಮಾತ್ರ ಬದಲಾವಣೆಯಾಗಿಲ್ಲ, ರೂಪ ಕೂಡ ಸಂಪೂರ್ಣ ಬದಲಾಗಿದೆ. ಮತದಾನ ವೇಳೆ ಮತದಾರರನ್ನು ಗೊಂದಲಕ್ಕೀಡು ಮಾಡಿ ಬಿಜೆಪಿ (BJP) ಮತಗಳನ್ನು ಅಡ್ಡದಾರಿಯಲ್ಲಿ ಸೆಳೆಯಲು ಕಾಂಗ್ರೆಸ್ ಮಾಡಿರುವ ತಂತ್ರ ಅಂತ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
Advertisement
Advertisement
ಈಶಪ್ಪ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ (Congress) ಅಭ್ಯರ್ಥಿ ಹಾಲಿ ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಸೂಚಕರಾಗಿರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈಶಪ್ಪ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಂತ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ – ಕನಕಪುರದ ಹಲವೆಡೆ ಪ್ರಚಾರ
Advertisement
2021ರ ಉಪಚುನಾವಣೆಯಲ್ಲಿ ಬಸನಗೌಡ ತುರವಿಹಾಳ ವಿರುದ್ಧ ಪ್ರತಾಪ್ ಗೌಡ ಪಾಟೀಲ್ ಸೋತಿದ್ದರು. ಈಗಲೂ ಈ ಇಬ್ಬರು ಅಭ್ಯರ್ಥಿಗಳ ನಡುವೆಯೇ ಜಿದ್ದಾಜಿದ್ದಿನ ಫೈಟ್ ಇದೆ. ಉಪಚುನಾವಣೆ ಸೋಲಿನಿಂದ ಪಾಠ ಕಲಿತಂತೆ ಕಾಣುವ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ 4ನೇ ಬಾರಿಗೆ ಶಾಸಕರಾಗುವ ಹೆಬ್ಬಯಕೆಯೊಂದಿಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
Advertisement
ಉಪಚುನಾವಣೆ ಗೆಲುವಿನ ಬಳಿಕ ಅಲ್ಪಾವಧಿಗೆ ಶಾಸಕರಾದ ಬಸನಗೌಡ ತುರವಿಹಾಳ ಮತ್ತೊಂದು ಅವಧಿಗೆ ಶಾಸಕರಾಗಲು ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸಿದ್ದಾರೆ. ಇದರ ಮಧ್ಯೆ ಪಕ್ಷೇತರ ಅಭ್ಯರ್ಥಿ ಈಶಪ್ಪ ತನ್ನ ಹೆಸರು, ರೂಪ ಬದಲಿಸಿಕೊಂಡು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಸಿ.ಟಿ.ರವಿ ಆಗಲಿ: ಈಶ್ವರಪ್ಪ ಘೋಷಣೆ