ವಿಜಯಪುರ: ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಜಿಲ್ಲೆಯ ಅಧಿಕಾರಿಯೊಬ್ಬರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲೋಕಾಯುಕ್ತ (Lokayukta) ಇಲಾಖೆಯಲ್ಲಿ ಸಿಪಿಐ ಆಗಿದ್ದ ಮಾಜಿ ಅಧಿಕಾರಿ ಮಹೀಂದ್ರ ಕುಮಾರ್ ನಾಯಕ್ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ.
ಜಿಲ್ಲೆಯ ನಾಗಠಾಣ (Nagathan) ಮೀಸಲು ಮತಕ್ಷೇತ್ರದಿಂದ ಮಹೀಂದ್ರ ಕುಮಾರ್ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಬಿಜೆಪಿ (BJP) ಪಕ್ಷದ ಆಕಾಂಕ್ಷಿಯಾಗಿರುವ ಅವರು ಟಿಕೆಟ್‍ಗಾಗಿ ಕಾದಿದ್ದಾರೆ. ಈ ಮೊದಲು ಬಾಗಲಕೋಟೆ (Bagalakote) ಜಿಲ್ಲೆಯ ಲೊಕಾಯುಕ್ತ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ
ತಮ್ಮ ಹುದ್ದೆಗೆ ಮಹೀಂದ್ರ ಕುಮಾರ್ ಮಾರ್ಚ್ ತಿಂಗಳಲ್ಲೇ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಕಳೆದ 20 ದಿನಗಳ ಹಿಂದೆಯಷ್ಟೆ ಇವರನ್ನು ಬೆಂಗಳೂರು (Bengaluru) ಲೋಕಾಯುಕ್ತ ಡಿಜಿಪಿ ಕೇಂದ್ರ ಕಛೇರಿಗೆ ವರ್ಗಾಯಿಸಲಾಗಿತ್ತು. ಮಾ.31 ರಂದು ರಾಜೀನಾಮೆ ಅಂಗೀಕಾರವಾಗಿದೆ. ಇದೀಗ ಸಕ್ರಿಯ ರಾಜಕಾರಣಕ್ಕೆ ಮಾಜಿ ಪೊಲೀಸ್ ಅಧಿಕಾರಿ ಎಂಟ್ರಿ ಆಗಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ಮಾಜಿ ಸಚಿವ ಬಿಜೆಪಿ ಪ್ರಭಾವಿ ನಾಯಕ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಬಿಜೆಪಿ ಟಿಕೆಟ್ ಯಾರಿಗಾದರೂ ಸಿಗಲಿ, ಕೆಲಸ ಮಾಡುವುದಾಗಿ ಮಹೀಂದ್ರ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅಳೆದುತೂಗಿ ಹೈಕಮಾಂಡ್‌ಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಶಿಫಾರಸು ಮಾಡ್ತೇವೆ: ಜೋಶಿ