ಬೆಳಗಾವಿ: ಎರಡು ದಿನಗಳಿಂದ ಎಲ್ಲಾ ಜಿಲ್ಲೆಯ ಕೋರ್ ಕಮಿಟಿ ಸದಸ್ಯರನ್ನು, ಪಕ್ಷದ ಅತ್ಯಂತ ಕೆಲ ಪ್ರಮುಖ ಮುಖಂಡರ ನೇತೃತ್ವದಲ್ಲೂ ಸಭೆ ಮಾಡಿದ್ದೇವೆ. ಅಳೆದುತೂಗಿ ರಾಷ್ಟ್ರೀಯ ಚುನಾವಣಾ ಸಮಿತಿ, ಸಂಸದೀಯ ಮಂಡಳಿಗೆ ಶಿಫಾರಸು ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಪದಾಧಿಕಾರಿಗಳು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ನಾಳೆಯಿಂದ ಕಾರ್ಯಕರ್ತರ ಅಭಿಪ್ರಾಯ ಮತ್ತು ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಳೆದು ತೂಗಿ ನೋಡಿ, ನಾವು ನಾಳೆ ಮತ್ತು ನಾಡಿದ್ದು ವಿಸ್ತೃತವಾಗಿ ಸಭೆ ಮಾಡಲಿದ್ದೇವೆ. ಅದಕ್ಕಿಂತ ಮೊದಲು ಕೆಲವು ಹೆಚ್ಚಿನ ವಿವರವನ್ನು ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
Advertisement
Advertisement
ಬೆಳಗಾವಿ (Belagavi) ಮತ್ತು ಬೆಂಗಳೂರು (Bengaluru) ಅತಿಹೆಚ್ಚು ಸ್ಥಾನ ಹೊಂದಿರುವ ಪ್ರದೇಶವಾಗಿದೆ. ಆದ್ದರಿಂದ ಇನ್ನೂ ಕೆಲವು ಹೆಚ್ಚಿನ ವಿವರ ಸಂಗ್ರಹಿಸಿ ನಾಳೆ ಶಿಫಾರಸು ಮಾಡುತ್ತೇವೆ. ರಾಷ್ಟ್ರೀಯ ಚುನಾವಣಾ ಸಮಿತಿ, ಸಂಸದೀಯ ಮಂಡಳಿಗೆ ಶಿಫಾರಸು ಮಾಡುತ್ತೇವೆ. ಕೋರ್ ಕಮಿಟಿ ಸಭೆ ಮುಗಿಸಿಕೊಂಡು ಸೋಮವಾರ ಸಂಜೆ ಬೆಂಗಳೂರಿಗೆ ಹೋಗುತ್ತೇವೆ ಎಂದರು.
Advertisement
ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ನಾಯಕರಿಂದ ಯಾವುದೇ ಗದ್ದಲ ಇಲ್ಲ. ಗಲಾಟೆ ಇಲ್ಲ. ಸ್ಪರ್ಧೆ ಜಾಸ್ತಿ ಇದ್ದಲ್ಲಿ, ಹೆಚ್ಚು ಸೀಟ್‌ಗಳಿದ್ದಲ್ಲಿ ಹೆಚ್ಚು ಗಮನ ಕೊಡಬೇಕಾಗುತ್ತದೆ. ರಮೇಶ್ ಜಾರಕಿಹೊಳಿ ಇಲ್ಲೇ ಇದ್ದಾರೆ. ಅವರನ್ನ ಕೇಳಿ ಯಾವ ಕಿತ್ತಾಟ ಇಲ್ಲ ಎಂದು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ (BJP) ಬಣ ಬಡೆದಾಟ ಅಲ್ಲಗಳೆದರು. ಇದನ್ನೂ ಓದಿ: ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಿಬಿಐ ಜವಾಬ್ದಾರಿ: ಮೋದಿ
Advertisement
ಬೆಳಗಾವಿಯಲ್ಲಿ 18ಕ್ಕೆ 18 ಕ್ಷೇತ್ರ ಗೆಲ್ಲಲು ಒನ್ ಟೂ ಒನ್ ಮಾತನಾಡಿದ್ದೇನೆ. ಬರುವ ಏ.8 ಅಥವಾ 9ರಂದು ಪಟ್ಟಿ ಬಿಡುಗಡೆ ಆಗುತ್ತದೆ. ಎಲ್ಲರೂ ಸನ್ನದ್ಧರಾಗಿ ಎಂದು ಸೂಚಿಸಿದ್ದೇನೆ. ಸಾಮಾನ್ಯವಾಗಿ 18ಕ್ಕೆ 16 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಈಗ 18 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾನಹಾನಿ ಪ್ರಕರಣ – ಏಪ್ರಿಲ್ 13 ರವರೆಗೂ ರಾಗಾಗೆ ರಿಲೀಫ್