ಬೆಂಗಳೂರು: ಮೂಡಿಗೆರೆ (Mudigere) ಜೆಡಿಎಸ್ (JDS) ಅಭ್ಯರ್ಥಿ ಎಂ.ಪಿ ಕುಮಾರಸ್ವಾಮಿ (M.P Kumaraswamy) ಮಾಜಿ ಪ್ರಧಾನಿ ದೇವೇಗೌಡ (H.D Deve Gowda) ಅವರನ್ನು ಬುಧವಾರ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ ನಿಂಗಯ್ಯ ಅವರು ಸ್ವಯಂಪ್ರೇರಿತರಾಗಿ ನಾಮಪತ್ರ ಹಿಂಪಡೆದಿದ್ದಾರೆ. ಅವರೂ ಕೂಡ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಈ ಬಾರಿ ಮತದಾರರು ನನ್ನ ಪರವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ (Election) ಗೆಲ್ಲುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಕೊಡ್ತೀನಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ – ಡಿಕೆಶಿ
Advertisement
Advertisement
ಜೆಡಿಎಸ್‍ನಲ್ಲಿ ನಿಂತು ಗೆಲ್ತೀರಾ ಎಂಬ ಬಿಜೆಪಿ (BJP) ಮುಖಂಡ ಸಿ.ಟಿ ರವಿ (C.T Ravi) ಹೇಳಿಕೆ ವಿಚಾರವಾಗಿ, ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನಿಸಲಿದ್ದಾರೆ. ಚುನಾವಣೆಯ ನಂತರ ಎಲ್ಲವೂ ತಿಳಿಯಲಿದೆ ಎಂದು ಕುಟುಕಿದ್ದಾರೆ.
Advertisement
Advertisement
ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಸಚಿವ ಸೋಮಣ್ಣ ಆಮಿಷ ಒಡ್ಡಿದ ವಿಚಾರವಾಗಿ, ಸೋಮಣ್ಣ ದೊಡ್ಡವರು. ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ ಅವರು ಈ ಬಗ್ಗೆ ಮಾತಾಡುತ್ತಾರೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D Kumaraswamy) ಈಗಾಗಲೇ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ದೇವೇಗೌಡರು ಪ್ರಚಾರಕ್ಕೆ ಬರಲಿದ್ದಾರೆ. ಈ ಬಾರಿ ಮತದಾರರಲ್ಲಿ ಜೆಡಿಎಸ್ ಪರ ಒಲವಿದೆ ಎಂದಿದ್ದಾರೆ. ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ