ಹಾವೇರಿ: ನೆಹರು ಓಲೇಕಾರ್ (Neharu Olekar) ನನ್ನ ಮೇಲೆ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಆದರೆ, ಓಲೇಕಾರ್ ಅವರು ನನ್ನ ಮೇಲಿರುವ ಆರೋಪಗಳ ಬಗ್ಗೆ ಮೊದಲು ಸ್ಪಷ್ಟೀಕರಣ ಕೊಡಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಓಲೇಕಾರ್ ವಿರುದ್ಧ ಕಿಡಿ ಕಾರಿದರು.
ಶನಿವಾರ ಶಿಗ್ಗಾಂವಿಯ (Shiggavi) ತಹಶೀಲ್ದಾರ್ ಕಚೇರಿಯಲ್ಲಿ 2023ರ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹಲವಾರು ಬಾರಿ ಶಿಗ್ಗಾಂವಿ ಮತಕ್ಷೇತ್ರದ ಜನರು ಆಶೀರ್ವದಿಸಿ ಬೆಂಬಲಿಸಿದ್ದಾರೆ. ಈ ಬಾರಿಯೂ ಹಿಂದಿನ ದಾಖಲೆಯನ್ನು ಮುರಿದು, ಅತ್ಯಧಿಕ ಮತದಿಂದ ಗೆದ್ದು ಬರುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ಯಾರ‍್ಯಾರಿದ್ದಾರೆ? – ಎಂ.ಬಿ.ಪಾಟೀಲ್ ಕೊಟ್ರು ಸುಳಿವು
Advertisement
Advertisement
ಈ ತಾಲೂಕಿನ ಮತದಾರರು ಪ್ರಬುದ್ಧ ಹಾಗೂ ಜಾಗೃತ ಮತದಾರರಿದ್ದಾರೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಜನರು ಮತವನ್ನು ನೀಡಿದ್ದಾರೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಎಲ್ಲಾ ವರ್ಗಕ್ಕೂ ಸಮಾನವಾದ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು. ಇದನ್ನೂ ಓದಿ: ಮೊಯ್ಲಿ ವಿರೋಧಿ ಮುನಿಯಾಲು ಉದಯ್‌ಗೆ ಕಾಂಗ್ರೆಸ್ ಟಿಕೆಟ್ – ಕಾರ್ಕಳದಲ್ಲಿ ಟೈಟ್ ಫೈಟ್ ಫಿಕ್ಸ್
Advertisement
Advertisement
ಹೊಸ ಕೈಗಾರಿಕೆ, ಟೆಕ್ಸ್ಟೈಲ್ ಪಾರ್ಕ್, ಐಐಟಿ, ಆಯುರ್ವೇದ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗಾಗಿ ಜನರು ಹಿಂದಿಗಿಂತಲೂ ಹೆಚ್ಚಿನ ಬೆಂಬಲವನ್ನು ಕೊಡುತ್ತಾರೆ. ನಮ್ಮದು ಆಡಳಿತ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳು ಬಹಳ ಇದ್ದಾರೆ. ಹಾಲಿ ಶಾಸಕರನ್ನು ಬದಲಾವಣೆ ಮಾಡಿದಾಗ ಬಂಡಾಯ ಸಹಜ. ಎರಡು ಮೂರು ದಿನಗಳಲ್ಲಿ ಎಲ್ಲವೂ ಶಮನವಾಗುತ್ತದೆ. ಸದ್ಯದಲ್ಲಿಯೇ ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದುಗೆ ಕೋಲಾರ ಟಿಕೆಟ್ ಮಿಸ್ – ವರುಣಾ ಒಂದೇ ಫಿಕ್ಸ್
ಚುನಾವಣೆ ಎಂದರೆ ಕುಸ್ತಿ ಕಣ. ನನ್ನ ಕ್ಷೇತ್ರದಲ್ಲಿ ಎದುರಾಳಿ ಯಾರೇ ಬರಲಿ ಪ್ರತಿಸ್ಪರ್ಧಿ ಗಟ್ಟಿಯಾಗಿದ್ದರೆ ಚುನಾವಣೆ ಚೆನ್ನಾಗಿ ನಡೆಯುತ್ತದೆ. ನನ್ನ ವಿಶ್ವಾಸ ನನ್ನ ಕ್ಷೇತ್ರದ ಜನರ ಮೇಲಿದೆ. ಹತ್ತು ಹಲವರು ಪೈಪೋಟಿ ಮಾಡಿದರೂ ಜನರು ನನಗೆ ಬೆಂಬಲ ಕೊಡುತ್ತಾರೆ. ಏಪ್ರಿಲ್ 19ರಂದು ಇನ್ನೊಂದು ಬಾರಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ (J.P.Nadda) ಅವರು ಆಗಮಿಸಲಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯವರಿಂದಲೇ ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಾಣ: ಲಕ್ಷ್ಮಣ ಸವದಿ