ಚಿಕ್ಕೋಡಿ (ಬೆಳಗಾವಿ): ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷ (Congress Party) ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆ ಬರುವವರೆಗೂ ಸುಮ್ಮನಿದ್ದ ಮೂಲ ಬಿಜೆಪಿಗರು ಈಗ ಬಹಿರಂಗವಾಗಿಯೇ ವಲಸಿಗ ಶಾಸಕರಿಗೆ ಸವಾಲು ಹಾಕಲು ಆರಂಭಿಸಿದ್ದಾರೆ.
Advertisement
ಬೆಳಗಾವಿಯಲ್ಲಿ ಗುಂಪುಗಾರಿಕೆ ಬಗೆಹರಿಯುತ್ತಿಲ್ಲ. ಬಿಜೆಪಿ (BJP) ಗೆ ಬೆಳಗಾವಿ ದೊಡ್ಡ ತಲೆನೋವಾಗಿದೆ. ಅಥಣಿ ಬಿಜೆಪಿಯಲ್ಲಿ ಅಸಮಾಧಾನದ ಜ್ವಾಲಾಮುಖಿ ಸ್ಫೋಟಗೊಂಡಿದೆ. ಅಥಣಿ ಕ್ಷೇತ್ರದ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿ (Laxman Savadi) ಟಿಕೆಟ್‍ಗೆ ಪಟ್ಟು ಹಿಡಿದಿದ್ದಾರೆ. ಹಾಲಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumatalli) ಮತ್ತು ಮಾಜಿ ಶಾಸಕ ಸವದಿ ಮಧ್ಯೆ ಟಿಕೆಟ್ ಸಂಘರ್ಷ ಶುರುವಾಗಿದೆ. ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅಥಣಿ ಕ್ಷೇತ್ರದಿಂದ ಈ ಬಾರಿ ನಮ್ಮ ತಂದೆ ಸ್ಪರ್ಧೆ ಮಾಡುತ್ತಾರೆ. ಅಥಣಿ ಕ್ಷೇತ್ರ (Athani Constituency)ವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ವಿರೋಧಿಗಳಿಗೇ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾಷಣ ಮಧ್ಯೆ ಆಝಾನ್- ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು ಅಂದ್ರು ಈಶ್ವರಪ್ಪ
Advertisement
Advertisement
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕ ಮಹೇಶ್ ಕುಮಟಳ್ಳಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಮಹೇಶ್ ಕುಮಟಳ್ಳಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಮಾಡಿದ್ದರು. ಎಲ್ಲೋ ಒಂದು ಕಡೆ ಅವತ್ತಿನಿಂದ ಇವತ್ತಿನವರೆಗೂ ಲಕ್ಷ್ಮಣ್ ಸವದಿ ಹಾಗೂ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಮೊನ್ನೆ ಅಷ್ಟೇ ರಮೇಶ್ ಜಾರಕಿಹೊಳಿ (Ramesh Jarakiholi) ಆಪ್ತಮಿತ್ರನಿಗೆ ಅಥಣಿ ಟಿಕೆಟ್ ಕೊಡಿಸುತ್ತೇನೆ. ಅವನಿಗೂ ಟಿಕೆಟ್ ಇಲ್ಲ ಅಂದ್ರೆ ನಾನು ಗೋಕಾಕ್ (Gokak Constituency) ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಬಿಜೆಪಿ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ರು.
Advertisement
ಇದು ಸವದಿ ಕುಟುಂಬಕ್ಕೆ ನುಂಗಲಾರದ ತುತ್ತಾಗಿತ್ತು. ಈ ಮಧ್ಯೆ ಸವದಿ ಅವರ ಪುತ್ರ ಚಿದಾನಂದ್ ಸವದಿ (Chidanand Savadi) ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರ ಆತ್ಮೀಯ ಮಹೇಶ್ ಕುಮಟಳ್ಳಿಗೆ ಗೋಕಾಕ್ ಮತಕ್ಷೇತ್ರವನ್ನು ಬಿಟ್ಟು ಕೊಡಲಿ ನಾವು ಮಾತ್ರ ಅಥಣಿಯಿಂದ ಸ್ಪರ್ಧೆ ಮಾಡುತ್ತೇವೆ ಎಂದು ಸಮರ ಸಾರಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ವಲಸಿಗ ಶಾಸಕರ ಸ್ಥಿತಿ ಸಧ್ಯ ಅತಂತ್ರವಾಗುವ ಲಕ್ಷಣಗಳು ಗೋಚರಿಸುತ್ತಿವೆ.