ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ

Public TV
1 Min Read
SHESHAPURA GOPAL

ಕೋಲಾರ: ಶ್ರೀನಿವಾಸಪುರ (Srinivaspur) ವಿಧಾನಸಭಾ ಕ್ಷೇತ್ರ ಜೆಡಿಎಸ್ (JDS) ಅಭ್ಯರ್ಥಿ ವೆಂಕಟಶಿವಾರೆಡ್ಡಿ ಜೊತೆ ಕೆ.ಎಚ್.ಮುನಿಯಪ್ಪ ಬಣದ ಹಿರಿಯ ಕಾಂಗ್ರೆಸ್ (Congress) ಮುಖಂಡ ಶೇಷಾಪುರ ಗೋಪಾಲ್ ಕಾಣಿಸಿಕೊಂಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ವಿರೋಧಿಯಾಗಿರುವ ಶೇಷಾಪುರ ಗೋಪಾಲ್ ಕಾಂಗ್ರೆಸ್ ಟಿಕೆಟ್‍ನ್ನು ರಮೇಶ್ ಕುಮಾರ್‌ಗೆ (Ramesh Kumar) ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈಗ ಶೇಷಾಪುರ ಗೋಪಾಲ್, ಜೆಡಿಎಸ್ ಅಭ್ಯರ್ಥಿ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಕ್ಷಾಂತರದ ಸೂಚನೆಯ ಅನುಮಾನ ಮೂಡಿಸಿವೆ.

ಫೋಟೋ ವೈರಲ್ ಆಗುತ್ತಿದ್ದಂತೆ ಶೇಷಾಪುರ ಗೋಪಾಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಖಾಸಗಿ ಕಾರ್ಯಕ್ರಮದಲ್ಲಿ ವೆಂಕಟಶಿವಾರೆಡ್ಡಿಯವರನ್ನು ಭೇಟಿಯಾಗಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಪೂರ್ವ ನಿಯೋಜಿತವಾದ ಭೇಟಿಯಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ನಾನು ಯಾವುದೇ ಆಮಿಷಗಳಿಗೆ ಒಳಗಾಗುವವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

 

Ramesh Kumar 2

ಕೆ.ಹೆಚ್.ಮುನಿಯಪ್ಪ ನನ್ನ ಆಪ್ತ ಎನ್ನುವ ವಿಚಾರ ದೂರವಾದದ್ದು ನಾನು ರಮೇಶ್ ಕುಮಾರ್ ಆಪ್ತ, ಆದರೆ ರಮೇಶ್ ಅವರಿಂದ ದೂರವಾಗಲು ಕಾರಣ ಅವರನ್ನೇ ಕೇಳಬೇಕು. ಅವರು ಕಾಂಗ್ರೆಸ್ ಎಂಬ ವೇದಿಕೆಯನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡು, ಪಕ್ಷದ ಸಿದ್ಧಾಂತಗಳನ್ನು ಹಾಗೂ ಸಂಸ್ಕೃತಿಯನ್ನು ನಿಜವಾದ ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋಲಿಗೆ ರಮೇಶ್ ಕುಮಾರ್ ಪಾತ್ರ ಏನಿದೆ ಎಂಬುದು ಜಗತ್ ಜಾಹಿರಾಗಿದೆ. ಅವರ ನಿಜವಾದ ಮುಖವಾಡ ಕಾಂಗ್ರೆಸ್ ನಾ ಟೋಪಿ ಆರ್‍ಎಸ್‍ಎಸ್‍ನ (RSS) ಚೆಡ್ಡಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

Share This Article