ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

Public TV
1 Min Read
KALLADKA PRABHAKAR BHAT

ಮಂಗಳೂರು: ಅರುಣ್ ಕುಮಾರ್ ಪುತ್ತಿಲ (Arun Kumar Puthila) ಕಾಂಗ್ರೆಸ್ (Congress) ವಿರುದ್ಧ, ಭಯೋತ್ಪಾದನೆ ಹಾಗೂ ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ. ಆದರೆ ಹಿಂದುತ್ವಕ್ಕೋಸ್ಕರ ಕೆಲಸ ಮಾಡುವ ಬಿಜೆಪಿ ವಿರುದ್ಧ ಮಾತನಾಡುವುದು ಎಂತಹ ಹಿಂದುತ್ವ (Hindutva) ಎಂದು ಆರ್‌ಎಸ್‌ಎಸ್ (RSS) ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಪುತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ARUN KUMAR PUTHILA

ಪುತ್ತೂರಿನಲ್ಲಿ (Puttur) ಅರುಣ್ ಕುಮಾರ್ ಪುತ್ತಿಲ ಹಿಂದುತ್ವದ ರಕ್ಷಣೆ ಮಾಡುವುದಾಗಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗಿಂತ (BJP) ದೊಡ್ಡ ಹಿಂದುತ್ವ ಯಾವುದು? ಬಿಜೆಪಿಯ ಗೆಲುವೇ ಹಿಂದುತ್ವದ ಗೆಲುವು. ಬಿಜೆಪಿಯ ಗೆಲುವಿಗಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಎಲ್ಲಾ ಕಡೆಯಿಂದ ಬಂದಿದ್ದಾರೆ. ಹಾಗಾಗಿ ನಾವು ಶೇ.100ರಷ್ಟು ಬಿಜೆಪಿಗೋಸ್ಕರ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

2008ರಲ್ಲಿ ಶಕುಂತಲಾ ಶೆಟ್ಟಿ (Shakunthala Shetty) ಸಹ ಇದೇ ರೀತಿ ನಿಂತಿದ್ದರು. ಪುತ್ತೂರಿನಲ್ಲಿ ಬಿಜೆಪಿ ಬೆಳೆಸಿದ ರಾಮ್ ಭಟ್ ಜೊತೆಗಿದ್ದರು. ಆಗಲೂ ಏನೂ ಆಗಿಲ್ಲ. ಈಗಿನದ್ದು ಭ್ರಮೆ. ಇಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ನಾನು ಬಿಜೆಪಿ ಸದಸ್ಯ ಅಲ್ಲ. ಆದರೆ ಎಲ್ಲರಿಗೂ ಜವಾಬ್ದಾರಿಯಿದೆ. ಚುನಾವಣೆ (Election) ಹೊತ್ತಲ್ಲಿ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ನಾವು ನಿಷ್ಕ್ರಿಯರಾದರೆ ಭಯೋತ್ಪಾದಕರು ಬೆಳೆದುಬಿಡುತ್ತಾರೆ. ಪುತ್ತಿಲ ಅಫಿಡವಿಟ್‌ನಲ್ಲಿ ದೇವಸ್ಥಾನದ ಹಣದ ಅವ್ಯವಹಾರ ಕೇಸ್ ಇದೆ. ಒಬ್ಬರಿಗೆ ಹೊಡೆದ ಕೇಸ್ ಹಾಗೂ ಒಬ್ಬ ಹೆಣ್ಣು ಮಗಳಿಗೆ ಅಪಘಾತ ಮಾಡಿ ಮಾನವೀಯತೆ ಇಲ್ಲದೆ ಓಡಿಹೋದ ಕೇಸ್ ಇವರ ಮೇಲಿದೆ. ಇವರ ಮೇಲೆ 307ರಂತಹ ಸೆಕ್ಷನ್ ಇದೆ. ಇವರದ್ದು ಹಿಂದುತ್ವನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

Share This Article