ಮಂಡ್ಯ: ಮಂಡ್ಯ (Mandya) ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ (JDS) ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮೇಲುಕೋಟೆ (Melukote) ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು (C.S.Puttaraju) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಹೇಳುತ್ತಿದ್ದವು. ಕುಮಾರಸ್ವಾಮಿ (H.D.Kumaraswamy) ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ. ಅಲ್ಲದೇ ದೇವೇಗೌಡರು (H.D.Deve Gowda) ಚುನಾವಣೆ (Election) ಪ್ರಚಾರ ಮಾಡಿರುವುದು ನಮಗೆ ಬಲ ತಂದಿದೆ. ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ. ಅತಂತ್ರ ಬರುವ ಪ್ರಶ್ನೆ ನಮ್ಮ ಮುಂದೆ ಇಲ್ಲ. ಒಂದು ವೇಳೆ ಅತಂತ್ರ ಬಂದರೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಸ್ವತಂತ್ರ ಸರ್ಕಾರ ಬರಲು ನಾವು ಚುನಾವಣೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ
ಮೇಲುಕೋಟೆ ಕ್ಷೇತ್ರದ ನಾರಾಯಣಪುರದಲ್ಲಿ ಬುಧವಾರ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಲ್ಕು ವರ್ಷದ ಹಿಂದೆ ಕೆ.ಆರ್.ಪೇಟೆ (K.R.Pete) ಕ್ಷೇತ್ರದಲ್ಲಿ ಕೊಲೆ ಆಗಿತ್ತು. ಆ ಕೊಲೆಯಲ್ಲಿ ರಘು ಎಂಬಾತ ಭಾಗಿಯಾಗಿದ್ದ. ಆ ರಘು ನಮ್ಮ ಬುಧವಾರ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದ. ನಾನು ಹಾಗೂ ನನ್ನ ಗನ್‌ಮ್ಯಾನ್ ಹೋಗಿ ಆ ಗಲಾಟೆಯನ್ನು ಬಿಡಿಸಿದೆವು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದೆವು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಿಸಲ್ಟ್ ತನಕ ಮಾತ್ರ ಕಾಂಗ್ರೆಸ್‍ನವರ ಉತ್ಸಾಹ, ಆಮೇಲೆ ಬಿಜೆಪಿಯ ಉತ್ಸಾಹ: ಬಿಸಿ ಪಾಟೀಲ್
ಪುಟ್ಟಣ್ಣಯ್ಯ ಕಾಲದಿಂದ ನಾವು ಸ್ಫೂರ್ತಿದಾಯಕವಾಗಿ ಚುನಾವಣೆ ಮಾಡುತ್ತಿದ್ದೆವು. ದರ್ಶನ್ ಪುಟ್ಟಣ್ಣಯ್ಯ ಮನುಷ್ಯ ಒಳ್ಳೆಯವನು ಎಂಬುದು ನನ್ನ ಭಾವನೆ. ದರ್ಶನ್ ಅಕ್ಕಪಕ್ಕ ಇರುವವರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಮಲ್ಲಿಗೆರೆ ಹಾಗೂ ಚಿನಕುರುಳಿಗೆ ದರ್ಶನ್ ಬಂದಿದ್ದಾರೆ. ಇಲ್ಲೂ ಸಹ ಗಲಾಟೆ ಮಾಡಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಎಲ್ಲರನ್ನೂ ಕಳುಹಿಸಿದ್ದಾರೆ. ಈ ರೀತಿಯ ನಡವಳಿಕೆಗಳು ನಡೆಯಬಾರದು. ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಹಜ. ಫಲಿತಾಂಶ ಬಂದಮೇಲೆ ಎಲ್ಲರೂ ಶಾಂತಿಯುತವಾಗಿ ಇರಬೇಕು. ದರ್ಶನ್‌ರವರು ಅವರ ಮುಖಂಡರಿಗೆ ಕಿವಿ ಮಾತು ಹೇಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ನಾವು ಮ್ಯಾಚ್ ಆಡೋಕೆ ಬಂದಿದ್ದೀವಿ, ಆಡಿ ಗೆಲ್ತೀವಿ: ಆರ್ ಅಶೋಕ್