ಬೆಂಗಳೂರು: ಕನಕಪುರದಲ್ಲಿ (Kanakapura) ನಾನು ಅಭ್ಯರ್ಥಿ ಅಲ್ಲ. ಇಲ್ಲಿ ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳೇ. 40 ವರ್ಷಗಳಿಂದ ನನ್ನನ್ನು ಸಾಕಿದ್ದಾರೆ. 8 ಚುನಾವಣೆಗಳಲ್ಲಿ (Election) ನನಗೆ ಮತಗಳನ್ನು ನೀಡಿದ್ದಾರೆ. ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳಾಗಿದ್ದು, ಅವರೇ ಚುನಾವಣೆಯನ್ನು ಮಾಡುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ನಾಮಪತ್ರ (Nomination Papers) ಸಲ್ಲಿಕೆಗೆ ಇನ್ನೆರಡು ದಿನ ಬಾಕಿಯಿದೆ. ಕಾಂಗ್ರೆಸ್ (Congress) ಅಂತಿಮ ಪಟ್ಟಿ ರಿಲೀಸ್ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಐದು ಬೆರಳಿದೆ. ಹಾಗಾಗಿ ನಾವು ಐದು ಪಟ್ಟಿ ರಿಲೀಸ್ ಮಾಡುತ್ತೇವೆ. ಬುಧವಾರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಉಳಿದ ಎಂಟು ಕ್ಷೇತ್ರಕ್ಕೂ ಅಂದೇ ಘೋಷಣೆಯಾಗುತ್ತದೆ. ನಾನು ಹುಟ್ಟಿರೋದೆ ಅಮವಾಸ್ಯೆಯಲ್ಲಿ. ದಿನೇಶ್ ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಹುಟ್ಟಿದ್ದೂ ಅವಮಾಸ್ಯೆಯಂದೇ. ನಾಮಪತ್ರ ಸಲ್ಲಿಸಲು ಅದೆಲ್ಲಾ ನಮಗೆ ಮ್ಯಾಟರ್ ಆಗಲ್ಲ ಎಂದರು. ಇದನ್ನೂ ಓದಿ: ಕೃಷ್ಣನೂರು ಉಡುಪಿಗೆ ಯಾರು ಅಧಿಪತಿ? ಅಖಾಡ ಹೇಗಿದೆ? ಬಲಾಬಲ ಏನು?
Advertisement
Advertisement
ಪುಲಕೇಶಿನಗರದಲ್ಲಿ (Pulakeshinagar) ಟಿಕೆಟ್ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪುಲಕೇಶಿನಗರದಲ್ಲಿ ಹೊಸ ಮುಖಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ. ಕನಕಪುರದಲ್ಲಿ ಆರ್.ಅಶೋಕ್ (R.Ashok) ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ
Advertisement
Advertisement
ಅನಿಲ್ ಲಾಡ್ (Anil Lad) ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಅವರು, ಗಾಳಿ, ನೀರು, ಬೆಳಕು, ಸೂರ್ಯ ಉದಯಿಸುವುದು ಹಾಗೂ ಕತ್ತಲಾಗುವುದು, ರಾಜಕಾರಣಿಗಳು ಪಕ್ಷ ಬದಲಿಸುವುದು ಎಲ್ಲಾ ಇದ್ದೇ ಇರುತ್ತದೆ. ಇದನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಬರಲಿದ್ದಾರೆ ಮೋದಿ, ಯೋಗಿ – ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ?
ಮಂಡ್ಯದಲ್ಲಿ ಕುಮಾರಸ್ವಾಮಿ (H.D.Kumaraswamy) ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೇ ಸ್ಪರ್ಧೆ ಮಾಡಿದರೂ ನಾವು ಈಗಾಗಲೇ ನಮ್ಮ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದೇವೆ. ಅವರೇ ಸ್ಪರ್ಧೆ ಮಾಡಲಿದ್ದಾರೆ. ಕುಮಾರಸ್ವಾಮಿ ಎದುರು ಅಭ್ಯರ್ಥಿ ಬದಲಾವಣೆ ಊಹಾಪೋಹ. ಈಗಿರುವ ಅಭ್ಯರ್ಥಿಯೇ ಮುಂದುವರೆಯಲಿದ್ದಾರೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ (Chikkamagaluru) ಬಿಜೆಪಿಯವರೇ (BJP) ಹೆಚ್.ಡಿ.ತಮ್ಮಯ್ಯನವರಿಗೆ (H.D.Thammaiah) ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದರು. ಅವರೆಲ್ಲರ ಒತ್ತಾಯದ ಮೇರೆಗೆ ತಮ್ಮಯ್ಯನವರಿಗೆ ಟಿಕೆಟ್ ನೀಡಲಾಗಿದೆ ಎಂದರು. ಇದನ್ನೂ ಓದಿ: ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ