2019ರ ಲೋಕಸಭಾ ಚುನಾವಣೆಗೆ ಬಿದ್ದ ಮತಗಳನ್ನು ಪರಿಗಣಿಸಿದರೆ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

Public TV
3 Min Read
Congress BJP JDS

ಬೆಂಗಳೂರು: ಕರ್ನಾಟಕ ಚುನಾವಣಾ (Karnataka Election) ದಿನ ಹತ್ತಿರಕ್ಕೆ ಬರುತ್ತಿದ್ದಂತೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಫೈನಲ್‌ ಮಾಡುತ್ತಿವೆ. ಅಭ್ಯರ್ಥಿಗಳ ಆಯ್ಕೆ ಫೈನಲ್‌ ಆಗುತ್ತಿದ್ದಂತೆ ರಾಜ್ಯದ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ.

ಆಡಳಿತರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌ ಈ ಬಾರಿ ಅಧಿಕಾರಕ್ಕೆ ನಾವೇ ಬರಲಿದ್ದೇವೆ ಎಂದು ಹೇಳುತ್ತಿವೆ. ಮೂರು ಪಕ್ಷಗಳು ಅಧಿಕಾರಕ್ಕೇ ನಾವೇ ಬರುತ್ತೇವೆ ಎಂದು ಹೇಳಿದರೂ ಅಂತಿಮವಾಗಿ ಈ ಪಕ್ಷಗಳ ಹಣೆಬರಹ ಬರೆಯುವವರು ರಾಜ್ಯದ ಮತದಾರರು.

ಕರ್ನಾಟಕದ ಮತದಾರರು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಭಿನ್ನವಾಗಿ ಯೋಚಿಸಿ ಮತದಾನ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ (Vidhan Sabha Election) ಒಂದು ಪಕ್ಷಕ್ಕೆ ಬಹುಮತ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಬಹುಮತ ನೀಡುತ್ತಿದ್ದಾರೆ. ಈ ಪರಿಣಾಮ ಕೇಂದ್ರದಲ್ಲಿ ಒಂದು ಸರ್ಕಾರ ಆಡಳಿತದಲ್ಲಿದ್ದರೆ ರಾಜ್ಯದಲ್ಲಿ ಇನ್ನೊಂದು ಪಕ್ಷಕ್ಕೆ ಅಧಿಕಾರ ನಡೆಸುತ್ತಿತ್ತು. ಆದರೆ 2018ರಲ್ಲಿ ಬಿಜೆಪಿ (BJP) ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಬಹುಮತ ನೀಡಿರಲಿಲ್ಲ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಗೆದ್ದ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲ ನಡೆಸಿದ ಬಳಿಕ ಅಧಿಕಾರಕ್ಕೆ ಏರಿದೆ.

Amit Shah Modi

2018ರಲ್ಲಿ ಯಾರಿಗೂ ಬಹುಮತ ಇಲ್ಲದೇ ಇದ್ದ ಕಾರಣ ಬಿಜೆಪಿ ಮಣಿಸಲು ಕಾಂಗ್ರೆಸ್‌, ಜೆಡಿಎಸ್‌ (Congress, JDS) ಮೈತ್ರಿ ಸರ್ಕಾರ ಅಧಿಕಾರಕ್ಕೆ ಏರಿ ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸಿದ್ದವು. ಆದರೆ ಎರಡೂ ಪಕ್ಷಗಳ ಒಳಜಗಳ, ನಾಯಕರ ಕಿತ್ತಾಟದಿಂದಾಗಿ ಬಿಜೆಪಿ ಜಯಗಳಿಸಿತ್ತು. ಮೋದಿ ಪರ ಅಲೆಯಿಂದಾಗಿ ಭರ್ಜರಿ ಮತಗಳು ಬಿದ್ದ ಪರಿಣಾಮ ಯಾರು ನಿರೀಕ್ಷೆ ಮಾಡದ ಸಾಧನೆಯನ್ನು ಬಿಜೆಪಿ ಮಾಡಿತ್ತು. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದಷ್ಟೇ ಮತಗಳು ಬಿದ್ದರೆ ರಾಜ್ಯದಲ್ಲಿ ಮತ್ತೆ ಬಿದ್ದರೆ ಬಿಜೆಪಿ ಭರ್ಜರಿ ಜಯಗಳಿಸಬಹುದು. ಹೀಗಾಗಿ ಇಲ್ಲಿ2019ರ ಲೋಕಸಭಾ ಚುನಾವಣೆಯಲ್ಲಿ ಬಿದ್ದ ಮತಗಳನ್ನು ಆಧಾರಿಸಿ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದು ಎಂಬ ವಿವರವನ್ನು ನೀಡಲಾಗಿದೆ.

ಯಾವ ಚುನಾವಣೆ ಎಷ್ಟು ಸ್ಥಾನ?
2018 ವಿಧಾನಸಭಾ ಚುನಾವಣೆ
ಬಿಜೆಪಿ 104, ಕಾಂಗ್ರೆಸ್‌ 80, ಜೆಡಿಎಸ್‌ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು.

2019ರ ಲೋಕಸಭಾ ಚುನಾವಣೆ
ಬಿಜೆಪಿ 25, ಕಾಂಗ್ರೆಸ್‌1, ಜೆಡಿಎಸ್‌ 1, ಪಕ್ಷೇತರ 1 ಸ್ಥಾನ ಸಿಕ್ಕಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ 51.7%, ಕಾಂಗ್ರೆಸ್‌ 32.1%, ಜೆಡಿಎಸ್‌ 9.7% ಮತಗಳು ಬಿದ್ದಿತ್ತು. ಈ ಚುನಾವಣೆಗೆ ಬಿದ್ದ ಮತಗಳನ್ನು ಪರಿಗಣಿಸಿದರೆ ಬಿಜೆಪಿ 170, ಕಾಂಗ್ರೆಸ್‌ 36, ಜೆಡಿಎಸ್‌ 11 ಸ್ಥಾನಗಳನ್ನು ಗೆಲ್ಲಬಹುದು.

congress jds

 

ಈ ರೀತಿಯ ಫಲಿತಾಂಶ ಬರುತ್ತಾ?
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಬಂದಾಗ ಜನರ ಚಿಂತನೆಯೇ ಬೇರೆ ಇರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ, ರಾಜ್ಯ ನಾಯಕರ ಮೇಲೆ ಚುನಾವಣೆಗಳು ನಡೆಯುತ್ತದೆ.

ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಾಗಿ ಜಾತಿಯೇ ಪ್ರಭಾವ ಬೀರುವುದರಿಂದ ಮೂರು ಪ್ರಮುಖ ಪಕ್ಷಗಳು ಈ ಮಾನದಂಡವನ್ನು ಆಧಾರಿಸಿ ಅಭ್ಯರ್ಥಿಗಳನ್ನು ಪ್ರಕಟಿಸುತ್ತವೆ ಮತ್ತು ಮಂತ್ರಿ ಸ್ಥಾನವನ್ನು ಹಂಚಿಕೆ ಮಾಡುತ್ತವೆ. ಸಿದ್ದರಾಮಯ್ಯ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಕಾಂಗ್ರೆಸ್‌ ಮುಂದಾಗಿತ್ತು. ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿತ್ತು. ಇದರ ಮುಂದುವರಿದ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿತ್ತು. ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

JDS CONGRESS LEADERS 1

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿದೆ. ಲಿಂಗಾಯತ ಮತ್ತು ಒಕ್ಕಲಿಗರಿಗೆ ಹೆಚ್ಚುವರಿ ಮೀಸಲಾತಿ ನೀಡಿದ್ದು ಅಲ್ಲದೇ ಪರಿಶಿಷ್ಟ ಜಾತಿ ಒಳಗಡೆಯೇ ಒಳ ಮೀಸಲಾತಿಯನ್ನು ತಂದಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಬಿಜೆಪಿ ರಿಸ್ಕ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಕೈ ಹಾಕಿದೆ. ಈ ನಿರ್ಧಾರ ಯಾರಿಗೆ ವರ? ಯಾರಿಗೆ ಶಾಪವಾಗುತ್ತಾ ಎನ್ನುವುದು ಮೇ 13ರಂದು ಪ್ರಕಟವಾಗಲಿದೆ.

Share This Article