ಬಾಗಲಕೋಟೆ: ಮೋದಿ (Narendra Modi) ಭಾಷಣ ಎಲ್ಲಾ ಸಂತೆ ಭಾಷಣ. ಯಾವುದೂ ಜಾರಿಗೆ ತರಲು ಗೊತ್ತಿಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ರಾಷ್ಟ್ರನಾಯಕರು ರಾಜ್ಯದಲ್ಲಿ ಟಿಕಾಣಿ ಹೂಡಿ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಬಾದಮಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೆಲ್ಲಾ 9ನೇ ತಾರೀಕಿನವರೆಗೂ ಇರುತ್ತಾರೆ. ಆಮೇಲೆ ಕರ್ನಾಟಕದಲ್ಲಿ ಏನಾಗಿದೆ ಎಂದು ಕೇಳಲು ಬರುತ್ತಾರಾ? ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರನಾಯಕರು ರಾಜ್ಯಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಸಹ ಬಂದಿದ್ದಾರೆ. ಚುನಾವಣೆ ಮುಗಿದ ಮೇಲೆ ಕರ್ನಾಟಕಕ್ಕೆ ಟಾಟಾ ಮಾಡಿ ಹೋಗುತ್ತಾರೆ. ಮತ್ತೆ ಬರೋದು ಲೋಕಸಭಾ ಚುನಾವಣೆಯ ವೇಳೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಜೆಡಿಎಸ್ ಮುಖಂಡ ಭೋಜೆಗೌಡರಿಂದ ಕಾಂಗ್ರೆಸ್ ಪರ ಪ್ರಚಾರ – ವೀಡಿಯೋ ವೈರಲ್
ಜನರ ಒಳಿತಿಗಾಗಿ ನಾನು ಸರ್ಪ ಆಗಲು ಸಿದ್ಧ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಪ ಆಗೋದಾದರೆ ಆಗಲಿ. ಆದರೆ ಸರ್ಪ ಯಾವಾಗಲೂ ಡೇಂಜರ್. ಅದು ಜನಕ್ಕೆ ಆದರೂ ಅಷ್ಟೇ. ಇನ್ನೊಬ್ಬರಿಗೆ ಆದರೂ ಅಷ್ಟೇ. ನಾನು ಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇವೆಲ್ಲಾ ಇವತ್ತಿನ ರಾಜಕಾರಣದಲ್ಲಿ ಅವಶ್ಯಕತೆ ಇರಲಿಲ್ಲ. ನಮ್ಮ ರಾಜ್ಯದಲ್ಲಿ ಅಕಾಲಿಕ ಮಳೆ ಆಗಿ ರೈತರ ಬೆಳೆ ನಾಶವಾಗಿದೆ. ಆ ಬಗ್ಗೆ ಚರ್ಚೆ ಆಗಬೇಕು. ಆ ಬಗ್ಗೆ ಚರ್ಚೆ ಮಾಡದೇ ಯಾವುದೋ ವಿಷಕನ್ಯೆ, ವಿಷಸರ್ಪದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜನರ ಬದುಕನ್ನು ಸರಿಪಡಿಸಿಕೊಡುತ್ತಾರಾ ಇವರು ಎಂದು ಹರಿಹಾಯ್ದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ
ಮೋದಿ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಎನ್ನುತ್ತಾರೆ. ಲೂಟಿ ಹೊಡೆಯುವುದೇ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯಾ? ಯಾರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಾರೋ ಅದು ಬಿಜೆಪಿಗೆ ಮತ್ತು ನರೇಂದ್ರ ಮೋದಿಯವರಿಗೆ ಅಭಿವೃದ್ಧಿ. ಅದು ಡಬಲ್ ಎಂಜಿನ್ ಸರ್ಕಾರ ಇದ್ರೆ ಮಾತ್ರ ಸಾಧ್ಯ ಎಂಬುದು ಅವರ ಮಾತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್
ಜೆಡಿಎಸ್ (JDS) ಕಾಂಗ್ರೆಸ್‌ನ ಬಿ ಟೀಮ್ ಎಂಬ ಬಿಜೆಪಿ ಆರೋಪದ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್‌ನ ಬಿ ಟೀಮ್ ಎನ್ನುತ್ತಾರೆ. ಕಾಂಗ್ರೆಸ್‌ನ ಸಿದ್ದರಾಮಯ್ಯ (Siddaramaiah) ಕೂಡಾ ಜೆಡಿಎಸ್ ಬಿ ಟೀಮ್ ಎನ್ನುತ್ತಿದ್ದಾರೆ. ನಾನು ಯಾವ ಟೀಮ್ ಎಂದು ಹೇಳಲಿ? ನಾನು ಜನತೆಯ ಬಿ ಟೀಮ್. ನಾನು ರಾಜ್ಯದ ಕನ್ನಡಿಗರ ಬಿ ಟೀಮ್ ಎಂದರು. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?