ಮಂಗಳೂರು: ತನ್ನ ಮಗ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಪ್ರಧಾನಿ, ಮಣ್ಣಿನ ಮಗ ಕಾಲಿಗೆ ಚಕ್ರ ಕಟ್ಟಿ ತಿರುಗಾಡುತ್ತಿದ್ದಾರೆ. ತನ್ನ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಲೆಕ್ಕಿಸದೆ ಮಗನಿಗಾಗಿ ಶ್ರಮಿಸುತ್ತಿದ್ದಾರೆ. ಇದರ ಜೊತೆಗೆ ತುಳುನಾಡಿನ ದೈವ-ದೇವರ ಮೊರೆ ಹೋದ ಮಾಜಿ ಪ್ರಧಾನಿ ಹರಕೆಯನ್ನೂ ಹೊತ್ತಿದ್ದಾರೆ.
Advertisement
ರಾಜ್ಯದಲ್ಲಿ ಚುನಾಚಣಾ ಕಾವು ಹೆಚ್ಚಾಗುತ್ತಿದ್ದು ಯಾರು ಶಾಸಕರಾಗುತ್ತಾರೆ, ಯಾವ ಪಕ್ಷಕ್ಕೆ ಬಹುಮತ ಬರುತ್ತೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಜೆಡಿಎಸ್ (JDS) ವರಿಷ್ಠ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ (HD Deve Gowda) ಮಾತ್ರ ಈ ಬಾರಿ ತನ್ನ ಮಗನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಛಲದಲ್ಲಿ ಇದ್ದಾರೆ. ಇದಕ್ಕೆಲ್ಲ ದೈವಬಲ ಬೇಕೆಂಬ ಕಾರಣಕ್ಕಾಗಿ ಇದೀಗ ದೈವ ದೇವರ ನೆಲೆಬೀಡು ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿಗೆ ಮಣ್ಣಿನ ಮಗ ಕಾಲಿಟ್ಟಿದ್ದಾರೆ.
Advertisement
Advertisement
ಮಂಗಳೂರು (Mangaluru) ಸೇರಿದಂತೆ ಕರಾವಳಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ ಇಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ವರಿಷ್ಠ ದೇವೇಗೌಡ ಇಲ್ಲಿನ ದೈವ ದೇವರ ಮೊರೆ ಹೋಗಿದ್ದಾರೆ. ತನ್ನ ಮಗನನ್ನು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿಸುವಂತೆ ದೈವ ದೇವರಲ್ಲಿ ಪ್ರಾರ್ಥಿಸಲು ಮಂಗಳೂರಿಗೆ ಬಂದಿದ್ದಾರೆ. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ದೈವ, ದೇವರು ಹಾಗೂ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ಜೆಡಿಎಸ್ ಕರಾವಳಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದ ಮಂಗಳೂರು ಉತ್ತರ ಕ್ಷೇತ್ರದಲ್ಲೇ ಮೊಯಿದ್ದೀನ್ ಬಾವಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಾವಾ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ದೇವೇಗೌಡರು ಬಂದಿದ್ದರು. ಇದನ್ನೂ ಓದಿ: ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ
ಪ್ರಚಾರ ಸಭೆಗೂ ಮೊದಲು ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾಕ್ಕೆ ಭೇಟಿ ನೀಡಿದ್ದು ಬಳಿಕ ಅಲ್ಲಿನ ಕಾರ್ಯಕರ್ತರ ಮೂಲಕ ದೇವಿಗೆ ಹರಕೆ ಹೇಳಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರಂಗಪೂಜೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಅಲ್ಲೇ ಸಮೀಪದ ಪೆರಾರ ಬ್ರಹ್ಮಬಲಾಂಡಿ ದೈವಸ್ಥಾನಕ್ಕೆ ಭೇಟಿ ನೀಡಿ ಅಲ್ಲೂ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಗುರುಕಂಬಳ ಹಝ್ರತ್ ಅಸ್ತ್ರಾರುದ್ದೀನ್ ಅಹ್ಲಿಯಾ ದರ್ಗಾಕ್ಕೆ ಭೇಟಿ ನೀಡಿ ಉಸ್ತಾದ್‌ರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಮಾವೇಶದಲ್ಲಿ ಮಾತನಾಡಿ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು. ಇದನ್ನೂ ಓದಿ: ವೋಟ್ ಹಾಕಿ ಸೈ ಎನಿಸಿಕೊಂಡ 104ರ ವೃದ್ಧೆ – ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಶುರು