ಹುಬ್ಬಳ್ಳಿ: ಹಾಸನದಲ್ಲಿ (Hassan) ಭವಾನಿ ರೇವಣ್ಣ (Bhavani Revanna) ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ (Hassan) ಸದೃಢ ಕಾರ್ಯಕರ್ತರಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಿದೆ. ವಾಸ್ತವಿಕ ಮತ್ತು ಗ್ರೌಂಡ್ ರಿಯಾಲಿಟಿ ಅರಿತು ನಾನು ಮಾತನಾಡುತ್ತಿದ್ದೇನೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ನಾನು ನನ್ನದೆಯಾದ ರೀತಿಯಲ್ಲಿ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿದ್ದೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ ಎಂದರು.
Advertisement
Advertisement
ಗೊಂದಲ ಬಗ್ಗೆ ಹಲವಾರು ಚರ್ಚೆ, ನಾಲ್ಕು ಗೋಡೆಗಳಲ್ಲಿ ನಡೆದಿದ್ದಾಗಿದೆ. ಆದರೆ ಮಾಧ್ಯಮಗಳು ತಮಗೆ ಏನು ಬೇಕೋ ಹಾಗೇ ಮಾತನಾಡುತ್ತಿದ್ದಾರೆ. ಈಗ ಅವರಿಗೆ ಟಿಕೆಟ್ ಕೊಟ್ಟು ನಾಳೆ ಸೋತ ಮೇಲೆ ಮಾಧ್ಯಮಗಳಿಗೆ ಆಹಾರವಾಗಲ್ಲ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಕ್ಲೂ ನೀಡಿದ್ದೆ. ಕಳೆದ ಒಂದು ವರ್ಷದ ಹಿಂದೆ ಒಬ್ಬ ವ್ಯಕ್ತಿ ನಮ್ಮ ಕುಟುಂಬದ ಮೇಲೆ ಸವಾಲು ಹಾಕಿದ್ದರು. ಆಗಿನಿಂದ ನಾನು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
Advertisement
Advertisement
ರೇವಣ್ಣ (HD Revanna) ಮತ್ತು ಅವರ ಕುಟುಂಬಕ್ಕೆ ಯಾರು ತಲೆ ತುಂಬಿತ್ತಿದ್ದಾರೆ ಅಂತ ಗೊತ್ತು. ಆದರೆ ಅವರು ಅಂತಹ ಶಕುನಿಗಳ ಮಾತು ಕೇಳುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂತಿದ್ದಾರೆ. ಅವರು ಅಂತಹವರಿಗೆ ಹಾಲೆರಿಯುತ್ತಿದ್ದಾರೆ. ಈ ಮಣ್ಣಿನ ಗುಣದಲ್ಲಿಯೇ ಅದು ಇದೆ. ಇಂತಹ ಸಂಗತಿಗಳಿಂದ ಕುರುಕ್ಷೇತ್ರ ಯುದ್ಧವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ
ದೇವೇಗೌಡರ (HD Devegowda) ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆ ಮಾಧ್ಯಮ ಸೃಷ್ಟಿಯಾಗಿದೆ. ನಾಲ್ಕು ಗೋಡೆಗಳ ನಡುವೆ ವಿಚಾರ ಹೇಗೆ ಮಾಧ್ಯಮಗಳಿಗೆ ಗೊತ್ತಾಗುತ್ತೆ? ಇದೆಲ್ಲಾ ಮಾಧ್ಯಮಗಳ ಅಂತೆ ಕಂತೆ ಸುದ್ದಿಯಾಗಿದೆ. ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: YouTube ಡೌನ್ – ಜಾಗತಿಕವಾಗಿ ಹಲವು ಬಳಕೆದಾರರಿಗೆ ಸ್ಥಗಿತ