ಹೆಲಿಕಾಪ್ಟರ್‌ನಲ್ಲಿ ಬಂದು ಮತ ಹಾಕಿದ ಹೆಚ್.ಡಿ.ದೇವೇಗೌಡರು

Public TV
1 Min Read
hd devegowda

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda) ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮತ ಚಲಾಯಿಸಿದರು.

ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ಹೆಲಿಕಾಪ್ಟರ್‌ ಮೂಲಕ ಬಂದ ಹೆಚ್‌.ಡಿ ದೇವೇಗೌಡ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆದರು. ಅದಾದ ಬಳಿಕ ಹೊಳೆನರಸೀಪುರದಿಂದ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ ಹೊಳೆನರಸೀಪುರ ಕ್ಷೇತ್ರದ ಮತಗಟ್ಟೆ ಸಂಖ್ಯೆ 251 ರಲ್ಲಿ ಹಕ್ಕು ಚಲಾವಣೆ ಮಾಡಿದರು. ಇದನ್ನೂ ಓದಿ: ಮತ ಚಲಾಯಿಸಲು ಬಂದಿದ್ದ ವ್ಯಕ್ತಿ, ಮಹಿಳೆ ಪ್ರತ್ಯೇಕ ಮತದಾನ ಕೇಂದ್ರದಲ್ಲಿ ಸಾವು

ಈ ವೇಳೆ ಹೆಚ್‌ಡಿ ದೇವೇಗೌಡರ ಜೊತೆಗೆ ಪತ್ನಿ ಚನ್ನಮ್ಮ‌ ಜೊತೆಗಿದ್ದು, ಅವರು ತಮ್ಮ ಹಕ್ಕನ್ನು ಹೊಳೆನರಸೀಪುರದ ಪಡುವಲಹಿಪ್ಪೆ ಗ್ರಾಮದಲ್ಲಿ ಚಲಾಯಿಸಿದರು. ಇದನ್ನೂ ಓದಿ: ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು

Share This Article