Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ಸನ್ನು ಹೇಗೆ ಒಪ್ಪಿಕೊಂಡಿರಿ: ಶೆಟ್ಟರ್‌ಗೆ ಈಶ್ವರಪ್ಪ ಭಾವನಾತ್ಮಕ ಪತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ಸನ್ನು ಹೇಗೆ ಒಪ್ಪಿಕೊಂಡಿರಿ: ಶೆಟ್ಟರ್‌ಗೆ ಈಶ್ವರಪ್ಪ ಭಾವನಾತ್ಮಕ ಪತ್ರ

Districts

ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ಸನ್ನು ಹೇಗೆ ಒಪ್ಪಿಕೊಂಡಿರಿ: ಶೆಟ್ಟರ್‌ಗೆ ಈಶ್ವರಪ್ಪ ಭಾವನಾತ್ಮಕ ಪತ್ರ

Public TV
Last updated: April 17, 2023 5:32 pm
Public TV
Share
3 Min Read
eshwarappa jagadeesh shettar
SHARE

ಶಿವಮೊಗ್ಗ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ (Congress) ಪಕ್ಷವನ್ನು ಯಾವ ರೀತಿ ಒಪ್ಪಿಕೊಂಡಿದ್ದೀರಿ ಎಂದು ಬಿಜೆಪಿ (BJP) ಹಿರಿಯ ನಾಯಕ ಈಶ್ವರಪ್ಪ (Eshwarappa) ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಪ್ರಶ್ನಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷವನ್ನು ಸೇರಿದ ಶೆಟ್ಟರ್‌ (Jagadish Shettar) ಅವರಿಗೆ ಈಶ್ವರಪ್ಪ ಪತ್ರವನ್ನು ಬರೆದು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ನನ್ನ ಅತ್ಮೀಯ ನಮಸ್ಕಾರಗಳು.

ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್‌ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ (RSS)  ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ.ಶಿವಪ್ಪ ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅವರದೇ ಪ್ರಭಾವದಲ್ಲಿ ಬೆಳೆದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು. ಕಾಂಗ್ರೆಸ್‌ ಪಕ್ಷದ ದೇಶ ವಿರೋಧಿ ಧೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು, ಭಾರತೀಯ ಜನತಾ ಪಕ್ಷದ ಮೂಲಕ ಅನೇಕ ಬಾರಿ ಶಾಸಕರಾಗಿ ಚುನಾಯಿತರಾಗಿದ್ದು ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಎತ್ತರಕ್ಕೆ ಬೆಳೆದವರು.

ಪ್ರಸಕ್ತ ಸಂದರ್ಭದಲ್ಲಿ ತಾಯಿಯಂತೆ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ ಆದರ್ಶಗಳನ್ನು ತೊರೆದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೆಸ್‌ ಪಕ್ಷಕ್ಕೆ ತಾವು ಸೇರಲು ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಟಕರ. ಇದನ್ನೂ ಓದಿ: ಫೇಕ್ ಐಡಿ ಮೂಲಕ ಕಾಮೆಂಟ್ ಮಾಡಿದರೆ ಜೈಲೇ ಗತಿ : ನಟ ಜಗ್ಗೇಶ್

ಮುಂದೆ ಒಂದು ದಿನ ತಾವು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದ ಸಂಧರ್ಭದಲ್ಲಿ ಸದನದಲ್ಲಿ ಗೋ ಹತ್ಯೆ ಪರ – ವಿರೋಧದ ಚರ್ಚೆ ನಡೆದರೆ ತಾವು ಗೋ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ? ಉಗ್ರ ಪಿಎಫ್‌ಐ ಸಂಘಟನೆ ಕುರಿತಾದ ಪರ-ವಿರೋಧದ ಚರ್ಚೆಯಲ್ಲಿ ಪಿಎಫ್‌ಐ ನಿರ್ಬಂಧ ತೆರವು ಮಾಡಲು ತಾವು ಸಮ್ಮತಿಸಲು ಸಾಧ್ಯವೇ? ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ತಮ್ಮ ಉಗ್ರ ಹೋರಾಟ ನನಗಿನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಈಗ ತಾವು ಅದೇ ಪಕ್ಷವನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ? ನಾವು ನಂಬಿ ಪ್ರತಿಪಾದಿಸುತ್ತಾ ಬಂದಿರುವ ಎಲ್ಲಾ ತತ್ವ, ಆದರ್ಶಗಳ ವಿರುದ್ಧ ಕೆಲಸ ಮಾಡುವ ಕಾಂಗ್ರೆಸ್‌ ಪಕ್ಷದೊಂದಿಗೆ ಕೆಲಸ ಮಾಡುವುದು ಹೇಗೆ ಸಾಧ್ಯ? ಈ ಕುರಿತು ಒಮ್ಮೆ ಯೋಚಿಸಿ ಎಂದು ಕೋರುತ್ತೇನೆ.

ಕೇವಲ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ತೊರೆಯುವ ಮಹತ್ವದ ನಿರ್ಧಾರ ಮಾಡುವ ಮುನ್ನ ಪಕ್ಷ ತಮಗೆ ಈ ಹಿಂದೆ ನೀಡಿದ ಸ್ಥಾನ-ಮಾನಗಳ ಕುರಿತು ಒಮ್ಮೆ ಅವಲೋಕಿಸಬೇಕೆಂದು ಕೋರುತ್ತೇನೆ.

 

ಯಾವುದೇ ವ್ಯಕ್ತಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾದರೆ ಅದು ಆತ ನಂಬಿರುವ ಪಕ್ಷದ ತತ್ವ, ಸಿದ್ಧಾಂತಗಳು ಹಾಗು ಪಕ್ಷಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಕಾರ್ಯಕರ್ತರ ಬೆಂಬಲದಿಂದ ಮಾತ್ರ ಎಂಬುದನ್ನು ತಾವು ಮರೆಯಬಾರದು. ತಮ್ಮ ಈ ಪಕ್ಷ ವಿರೋಧಿ ನಿಲುವಿನಿಂದ ಅನೇಕ ಹಿರಿಯ ನಾಯಕರಿಗೆ, ಪಕ್ಷವನ್ನು ಪ್ರೀತಿಸುವ ಅಸಂಖ್ಯಾತ ಕಾರ್ಯಕರ್ತರ ಮನಸ್ಸಿಗೆ ಅಪಾರವಾದ ನೋವಾಗಿದೆ. ದುಡುಕಿನ ನಿರ್ಧಾರ ಮಾಡದೇ ಒಮ್ಮೆ ಈ ಕುರಿತು ಸಮಗ್ರವಾಗಿ ಯೋಚಿಸಿ, ಕಾಲ ಇನ್ನೂ ಮಿಂಚಿಲ್ಲ.

ವಂದನೆಗಳೊಂದಿಗೆ

TAGGED:electioneshwarappaJagadish Shettarkarnatakapoliticsಈಶ್ವರಪ್ಪಕರ್ನಾಟಕಚುನಾವಣೆಜಗದೀಶ್ ಶೆಟ್ಟರ್ಬಿಜೆಪಿರಾಜಕೀಯಶಿವಮೊಗ್ಗ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Prahlad Joshi 4
Latest

ರೈತರ ಸಬಲೀಕರಣಕ್ಕಾಗಿ PM ಕುಸುಮ್-2.0ಗೆ ಕೇಂದ್ರ ಸಿದ್ಧತೆ – ಪ್ರಹ್ಲಾದ್‌ ಜೋಶಿ

Public TV
By Public TV
36 minutes ago
Chikkamagaluru
Chikkamagaluru

ಅಂಗನವಾಡಿ ಬಳಿ ಆಟವಾಡುತ್ತಿದ್ದಾಗ ತಗುಲಿದ ಕಬ್ಬಿಣದ ತಂತಿ – ಮಗುವಿನ ಮರ್ಮಾಂಗಕ್ಕೆ 6 ಹೊಲಿಗೆ

Public TV
By Public TV
57 minutes ago
supreme Court 1
Latest

13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ – ಸುಪ್ರೀಂ ಐತಿಹಾಸಿಕ ತೀರ್ಪು

Public TV
By Public TV
1 hour ago
gas cylinder mariage commercial
Bengaluru City

ಕಲ್ಯಾಣ ಮಂಟಪಗಳಿಗೆ ಗ್ಯಾಸ್‌ ಟ್ರಬಲ್‌ – ಮದ್ವೆ ಮನೆಯರೇ ತರಬೇಕು ಸಿಲಿಂಡರ್!

Public TV
By Public TV
2 hours ago
AI War
Latest

ಯುದ್ಧ ಭೂಮಿಯಲ್ಲಿ AI – ಇರಾನ್‌ ಮೇಲಿನ ದಾಳಿಗೆ ʻಕ್ಲಾಡ್ʼ ಸಹಾಯ ಮಾಡಿದ್ದು ಹೇಗೆ?

Public TV
By Public TV
2 hours ago
Banashankari temple Bengaluru
Bengaluru City

ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿತು ಯುದ್ಧದ ಬಿಸಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?