ಕಾಂಗ್ರೆಸ್‌ಗೆ ಬನ್ನಿ: ಶೆಟ್ಟರ್‌ಗೆ ಖಂಡ್ರೆ ಆಹ್ವಾನ

Public TV
2 Min Read
ESHWAR KHANDRE

ಬೀದರ್: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಕಾಂಗ್ರೆಸ್ (Congress) ಪಕ್ಷ ಸೆರ್ಪಡೆಯಾಗಲಿ ಎನ್ನುವ ಮೂಲಕ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಭಾಲ್ಕಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಒಂದು ಟಿಕೆಟ್‌ಗಾಗಿ ಮನೆಯ ಬಾಗಿಲು ಬಾಗಿಲು ಓಡಾಡುತ್ತಿದ್ದಾರೆ. ಲಕ್ಷ್ಮಣ ಸವದಿ (Laxman Savadi) ಟಿಕೆಟ್ ಸಿಗದೇ ಕಣ್ಣೀರು ಹಾಕಿ ಕೊನೆಗೂ ಕಾಂಗ್ರೆಸ್ ಸೆರ್ಪೆಡೆಯಾಗಿದ್ದಾರೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಯಾರು? – ಕೈ ಲೆಕ್ಕಾಚಾರ ಏನು? 

BJP Congress

ಹಿರಿಯರನ್ನು ಬಿಜೆಪಿ (BJP) ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಜನ ಗಮನಿಸುತ್ತಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಇದೇ ರೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಬರಲಿ. ಅಲ್ಲದೇ ಅವರ ಜೊತೆಗೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬರುತ್ತಾರೆ ಕಾದು ನೋಡಿ ಎಂದು ಹೊಸ ಬಾಂಬ್ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌ 

ಚಿತ್ತಾಪುರ ಕ್ಷೇತ್ರದಿಂದ ಮಣಿಕಂಠ ರಾಠೋಡ್‌ಗೆ (Manikanta Rathod) ಬಿಜೆಪಿ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಿಂದ ಬಿಜೆಪಿಯ ಸಂಸ್ಕೃತಿ ಗೊತ್ತಾಗುತ್ತದೆ. ಯಾಕೆಂದರೆ ಪೊಲೀಸರು ಹಾಗೂ ಕಾನೂನು ಅವರನ್ನು ಗೂಂಡಾ ಪಟ್ಟಿಯಿಂದ ತೆಗೆಯಬಾರದು ಎಂದಿದ್ದರು. ಆದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರನ್ನು ಗೂಂಡಾ ಪಟ್ಟಿಯಿಂದ ತೆಗೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ 

ಗೂಂಡಾಗಳಿಗೆ ಟಿಕೆಟ್ ನೀಡಿದ ಬಿಜೆಪಿಗೆ ಯಾವ ನೈತಿಕತೆ ಇದೆ? ಬಿಜೆಪಿಯವರು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸಚಿವರಿಗೆ ಭಾಲ್ಕಿ ಮೇಲೆ ಪ್ರೀತಿ ಇದ್ದರೆ ಇಲ್ಲೇ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಕೇಂದ್ರ ಸಚಿವರು ಗಾಳಿಯಲ್ಲಿ ಬಂದು ಗಾಳಿಯಲ್ಲೇ ಹೋಗುತ್ತಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್

Share This Article