ಚಿಕ್ಕಬಳ್ಳಾಪುರ: ನಾನು ಆಂಜನೇಯ (Anjaneya)ನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ (Dr. K Sudhakar) ಅವರು ಡಿಕೆ ಶಿವಕುಮಾರ್ (DK Shivakumar) ಅವರಿಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಂತರ ಮಾತನಾಡಿದ ಸುಧಾಕರ್, ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಪರ ಅಲೆ ಇದೆ. ಮೋದಿ (Narendra Modi) ಬಂದ ಕಡೆ ಸ್ಥಾನಗಳ ಏರಿಕೆ ಆಗುತ್ತಿದೆ. ನರೇಂದ್ರ ಮೋದಿಯವರೇ ವಿಶ್ವಾಸ, ಬಿಜೆಪಿ (BJP) ಯೇ ಭರವಸೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ ಅಭಿವೃದ್ಧಿಗೆ ಜನರಿಗೆ ಬಿಜೆಪಿ ಒಂದೇ ಆಯ್ಕೆ ಎಂದರು.
ಇದೇ ವೇಳೆ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ದೇಶದ್ರೋಹದ ಕೆಲಸ ಮಾಡಿದ್ರೆ ಅವರನ್ನು ನಿಷೇಧ ಮಾಡಬೇಕು. ದೇಶಪ್ರೇಮಿಯಾಗಿ ಒಳ್ಳೆಯ ಕೆಲಸ ಮಾಡಿದ್ರೆ ಅವರನ್ನು ಯಾಕೆ ನಿಷೇದ ಮಾಡ್ತಾರೆ. ಬಿಜೆಪಿಗೆ ಬಜರಂಗದಳಕ್ಕೂ ಹೋಲಿಕೆ ಮಾಡಲು ಆಗುತ್ತಾ..? ಪಿಎಫ್ ಐ ಉಗ್ರಗಾಮಿಗಳಿಗರ ಸಹಕಾರ ಕೊಡುವ ಸಂಘಟನೆನಾ ನಿಷೇಧ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ
ಬಜರಂಗದಳ (Bajrangdal) ದ ಮೇಲೆ ದೇಶ ದ್ರೋಹದ ಪ್ರಕರಣಗಳಿದ್ರೆ ಹೇಳಲಿ. ಬಜರಂಗದಳ ಹಿಂದೂ ಸಂಘಟನೆ ಅನ್ನೋ ಕಾರಣಕ್ಕೆ ನಿಷೇಧ ಮಾಡ್ತೀರಾ..? ಹಾಗಾಗಿಯೇ ನೀವು ಬಹುಸಂಖ್ಯಾತ ಹಿಂದೂಗಳು ಛೀಮಾರಿ ಹಾಕಿರೋದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ತಿರಸ್ಕಾರ ಮಾಡಿರೋದು. ಆಂಜನೇಯ ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯ ಮಾಡೋ ಕೆಲಸವನ್ನು ಡಿಕೆಶಿ ಮಾಡಬೇಕು ಅಂತ ಟಾಂಗ್ ನೀಡಿದ್ರು.