ಬೆಳಗಾವಿ: ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡುವವರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು ಎಂದು ಕಾಂಗ್ರೆಸ್ (Congress) ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಹರಿಹಾಯ್ದರು.
ನಗರದ ಟಿಳಕಚೌಕನಲ್ಲಿ ಉತ್ತರ ಕ್ಷೇತ್ರದಲ್ಲಿ ನಡೆದ ಬಿಜೆಪಿ (BJP) ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಹೇರುತ್ತೇವೆ ಎಂದು ಹೇಳಿದೆ. ಆದರೆ ಬಜರಂಗದಳ ನಿಷೇಧಿಸಲು ನಿಮ್ಮಪ್ಪನ ಬಳಿ ತಾಕತ್ ಇದೆಯಾ? ಯಾವನ ಅಪ್ಪನಿಗಾದರೂ ಧೈರ್ಯ ಇದೆಯಾ? ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ? ಬಜರಂಗದಳ ನಿಷೇಧ ಮಾಡ್ತೀವಿ ಅಂದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.
Advertisement
Advertisement
ಕಾಂಗ್ರೆಸ್ ಪಕ್ಷದ ನಿಯತ್ತು ಹೇಗಿದೆ ಗೊತ್ತಾ?. ರಾಮಸೇತು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಎಂದು ಅಫಿಡೆವಿಟ್ ಸಲ್ಲಿಸಿದರು. ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಒಂದೆಡೆ, ರಾಮಮಂದಿರ ಸ್ಥಾಪನೆ ಮಾಡುತ್ತಿರುವ ಪಕ್ಷ ಒಂದೆಡೆಯಾಗಿದೆ. ಬಜರಂಗಳ ಬ್ಯಾನ್ ಮಾಡಲು ತಾಕತ್ತಿದ್ದೇಯೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಜರಂಗದಳ ನಿಷೇಧ ಮಾಡಲು ಆಗಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಬಜರಂಗಿ ನಮ್ಮ ಹಿಂದೂ ಸಂಸ್ಕೃತಿಯ ಅಸ್ಮಿತೆಯಾಗಿದೆ. ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್ ಹೈಪರ್‌ಮಾರ್ಕೆಟ್ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್!
Advertisement
Advertisement
ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಶಂಕರಗೌಡ ಪಾಟೀಲ,ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್ ಭಾಗಿಯಾಗಿದ್ದರು. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು