ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಇದೇ ಮಾರ್ಚ್ 4 ರಂದು ದಾವಣಗೆರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಆಗಮಿಸಲಿದ್ದಾರೆ.
ದಾವಣಗೆರೆ (Davanagere) ನಗರದ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದಿಂದ (Aam Admi Party) ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಯಾರನ್ನೂ ಸೋಲಿಸುವುದು ನಮ್ಮ ಅಜೆಂಡಾ ಅಲ್ಲ: ಜನಾರ್ದನ ರೆಡ್ಡಿ
Advertisement
Advertisement
ಅಂದು ಬೆಳಗ್ಗೆ 11 ಗಂಟೆಗೆ ಸಮಾವೇಶದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮಾವೇಶದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಪ್ರಮಾಣ ವಚನ ಬೋಧನೆ ಮಾಡಲಾಗುತ್ತದೆ. ಹೊಸ ಬದಲಾವಣೆ ತರಲು ಎಎಪಿಗೆ ಬೆಂಬಲ ನೀಡುವಂತೆ ಜನತೆಗೆ ಕರೆ ನೀಡಲಾಗುವುದು.
Advertisement
ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಖಾತೆ ತೆರೆಯಲೇಬೇಕು ಎಂಬ ದೃಢ ಸಂಕಲ್ಪವನ್ನು ಎಎಪಿ ಮಾಡಿದೆ. ಆ ದೃಷ್ಟಿಯಿಂದ ರಾಜಕೀಯ ತಂತ್ರಗಾರಿಕೆ ರೂಪಿಸಲು ಪಕ್ಷ ಮುಂದಾಗಿದೆ. ಭ್ರಷ್ಟ ಸರ್ಕಾರಗಳನ್ನು ತೆಗೆದು ಹಾಕಲು ಪೊರಕೆಯನ್ನು ಹಿಡಿದು ಸ್ವಚ್ಚಗೊಳಿಸೋಣ ಎಂದು ಎಎಪಿ ಮುಖಂಡರು ಕರೆ ನೀಡಿದ್ದಾರೆ. ಇದನ್ನೂ ಓದಿ: ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ
Advertisement
ದೆಹಲಿಯಲ್ಲಿ ಸತತ ಎರಡು ಬಾರಿ ಆಡಳಿತದ ಚುಕ್ಕಾಣಿ ಹಿಡಿದಿರುವ ಎಎಪಿ ನಂತರ ಪಂಜಾಬ್‌ನಲ್ಲೂ ಅಧಿಕಾರ ಪಡೆದಿದೆ. ಜೊತೆಗೆ ಗೋವಾದಲ್ಲಿ 2 ಹಾಗೂ ಗುಜರಾತ್‌ನಲ್ಲಿ 5 ಎಂಎಲ್‌ಎ ಸ್ಥಾನಗಳನ್ನು ಗೆದ್ದು ಬೀಗಿದೆ. ಆ ಮೂಲಕ ರಾಷ್ಟ್ರೀಯ ಪಕ್ಷವಾಗಿ ಎಎಪಿ ಹೊರಹೊಮ್ಮಿದೆ. ಈಗ ಕರ್ನಾಟಕದಲ್ಲೂ ಖಾತೆ ತೆರೆಯಲು ಸಿದ್ಧತೆ ನಡೆಸಿದೆ.