ಬೆಂಗಳೂರು: ಸತತ ನಾಲ್ಕು ಬಾರಿ ಗೆದ್ದು ಈಗ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ (CT Ravi) ಈ ಚುನಾವಣೆಯಲ್ಲಿ ಸೋತಿದ್ದಾರೆ.
ತನ್ನ ಗರಡಿಯಲ್ಲಿ ಬೆಳಗಿದ್ದ ಕಾಂಗ್ರೆಸ್ಸಿನ ಹೆಚ್.ಡಿ.ತಮ್ಮಯ್ಯ (HD Thammaiah) ವಿರುದ್ಧವೇ ಸಿಟಿ ರವಿ ಸೋಲನ್ನು ಅನುಭವಿಸಿದ್ದಾರೆ. ಆರಂಭದಿಂದಲೇ ಸಿಟಿ ರವಿ ಹಿನ್ನಡೆ ಅನುಭವಿಸಿದ್ದರು. ಜೆಡಿಎಸ್ ತನ್ನ ಅಭ್ಯರ್ಥಿ ಹಾಕಿದ್ದರೂ ತಮ್ಮಯ್ಯ ಅವರನ್ನು ಬೆಂಬಲಿಸುವಂತೆ ಕರೆ ನೀಡಲಾಗಿತ್ತು. ಇದನ್ನೂ ಓದಿ: ಭಗವಂತ್ ಖೂಬಾ ವಿರುದ್ಧ ಕಿರುಕುಳ ಆರೋಪ ಮಾಡಿ ಗಳಗಳನೆ ಅತ್ತ ಪ್ರಭು ಚವ್ಹಾಣ್
Advertisement
Advertisement
ಕಾಂಗ್ರೆಸ್‍ಗೆ ಮತ ಹಾಕಿ ಎಂದು ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಬಹಿರಂಗವಾಗಿಯೇ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಚಿಕ್ಕಮಗಳೂರಿನಲ್ಲಿ ಲಿಂಗಾಯತರ ವೋಟ್ ಬ್ಯಾಂಕ್ ಜಾಸ್ತಿ ಒಕ್ಕಲಿಗರು ಸಂಖ್ಯೆ ಕಡಿಮೆ ಇದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 20 ಮುನ್ನಡೆ LIVE Updates
Advertisement
ಚಿಕ್ಕಮಗಳೂರು ಕ್ಷೇತ್ರದ ಜಾತಿ ವಿವರ :
ಲಿಂಗಾಯಿತರು : 45,291
ಒಕ್ಕಲಿಗರು : 15,629
ಮುಸ್ಲಿಂರು : 35,902
ಕುರುಬರು : 32.212
ಪ.ಜಾತಿ /ಪ.ಪಂ : 48,820
ಬ್ರಾಹ್ಮಣರು : 6,122
ಕ್ರಿಶ್ಚಿಯನ್ : 5,100
ತಮಿಳರು : 6,640