ಕೈತಪ್ಪಿದ ಮೊಳಕಾಲ್ಮೂರು ‘ಕೈ’ ಟಿಕೆಟ್- ಬೆಂಬಲಿಗರ ಸಭೆಯಲ್ಲಿ ಆಕಾಂಕ್ಷಿ ಯೋಗೀಶ್ ಬಾಬು ಕಣ್ಣೀರು

Public TV
2 Min Read
YOGESH BABU copy

ಚಿತ್ರದುರ್ಗ: ಮೊಳಕಾಲ್ಮೂರು (Molakalmuru) ಕಾಂಗ್ರೆಸ್ (Congress) ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯೋಗೀಶ್ ಬಾಬು (B.Yogesh Babu) ಕಣ್ಣೀರಿಟ್ಟಿದ್ದಾರೆ.

ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೀಶ್ ಬಾಬು ಮುಂದಿನ ನಿರ್ಧಾರ ಕೈಗೊಳ್ಳಲು ಬೆಂಬಲಿಗರ ಸಭೆ ನಡೆಸಿದ್ದರು. ಈ ವೇಳೆ ಗದ್ಗದಿತರಾದ ಯೋಗೀಶ್ ಬಾಬು ನಿಮ್ಮ ಅಭಿಮಾನ, ಪ್ರೀತಿ ಬಾಂಧವ್ಯ ಸದಾ ಹೀಗೆ ಇರಲಿ ಎಂದರು. ಇದನ್ನೂ ಓದಿ: ಗಂಗಾವತಿ ಜನ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ- ರೆಡ್ಡಿ ಚಿಹ್ನೆ ಬಗ್ಗೆ ಅನ್ಸಾರಿ ವ್ಯಂಗ್ಯ 

YOGESH BABU

2018ರ ಚುನಾವಣೆಯಲ್ಲಿ (Election) ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೀಶ್ ಬಾಬು, ಈ ಬಾರಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಸೇರಿದ ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (N.Y.Gopalakrishna) ಅವರಿಗೆ ಕಾಂಗ್ರೆಸ್ ನಾಯಕರು ಮಣೆ ಹಾಕಿದ್ದಾರೆ. ಹೀಗಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೂ ಕಾಂಗ್ರೆಸ್ ಬಂಡಾಯದ ಬೆಂಕಿ ಹಬ್ಬಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿರೋ ಜಯಲಲಿತಾ ಸೀರೆ, ಚಪ್ಪಲಿ, ಚಿನ್ನಾಭರಣ ಹರಾಜಿಗೆ ಅಧಿಕಾರಿ ನೇಮಕ! 

 ಶುಕ್ರವಾರ ಸಂಜೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಯೋಗೀಶ್ ಬಾಬು ಬೆಂಬಲಿಗರು, ಅಭಿಮಾನಿಗಳ ಸಭೆ ನಡೆಸಲಾಗಿತ್ತು. ಈ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರಿಂದ ಸಲಹಗಳು ಬಂದಿವೆ. ಅಲ್ಲದೇ ಸಭೆಯುದ್ದಕ್ಕೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ‘ಕೈ’ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಟಿಕೆಟ್ ಪಡೆಯಲು ಹಣವೇ ಮಾನದಂಡವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: KMFಗೆ ಬೊಮ್ಮಣ್ಣ ಕೈ ಹಾಕಿದ್ರೆ ರಕ್ತ ಕ್ರಾಂತಿಯಾಗುತ್ತೆ: ಸಿಎಂ ಇಬ್ರಾಹಿಂ ಎಚ್ಚರಿಕೆ   

ಹಣಬಲದಿಂದ ಟಿಕೆಟ್ ಪಡೆದಿರುವ ಗೋಪಾಲಕೃಷ್ಣ ಅವರನ್ನು ಸೋಲಿಸಲು ದಿಟ್ಟ ನಿರ್ಧಾರಕ್ಕೆ ಮುಂದಾದ ಬಾಬು ಬೆಂಬಲಿಗರು ಶತಾಯಗತಾಯ ಯೋಗೀಶ್ ಬಾಬು ಗೆಲುವಿಗೆ ಶ್ರಮಿಸಲು ಮುಂದಾಗಿದ್ದಾರೆ. ಹೀಗಾಗಿ ಗಡಿನಾಡು ಮೊಳಕಾಲ್ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ವಿರುದ್ಧ ಬಂಡಾಯದ ಬೆಂಕಿ ಧಗಧಗ ಹೊತ್ತಿ ಉರಿಯುತ್ತಿದ್ದು, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು

Share This Article