ಬೊಮ್ಮಾಯಿ ಬಳಿ ಸ್ವಂತ ಕಾರು ಇಲ್ಲ: ಆಸ್ತಿ ಎಷ್ಟಿದೆ?

Public TV
1 Min Read
BASAVARAJ BOMMAI 13

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬಳಿ ಯಾವುದೇ ಕಾರು ಇಲ್ಲ. ನನ್ನ ಬಳಿ ಯಾವುದೇ ಸ್ವಂತ ಕಾರು ಇಲ್ಲ ಎಂದು ಬೊಮ್ಮಾಯಿ ಅವರೇ ಚುನಾವಣಾ ಆಯೋಗಕ್ಕೆ (Election Commission) ತಿಳಿಸಿದ್ದಾರೆ.

ಇಂದು ಹಾವೇರಿಯ ಶಿಗ್ಗಾಂವಿಯ ತಹಶೀಲ್ದಾರ್ ಕಚೇರಿಯಲ್ಲಿ (Shiggaon Tahsildar Office) ಸಿಎಂ ಬೊಮ್ಮಾಯಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಗ್ರಾಮದೇವತೆ ದರ್ಶನ ಪಡೆದ ಸಿಎಂ ಪೂಜೆ ಸಲ್ಲಿಸಿ ಪುರಸಭೆ ಬಳಿಯ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಸಿಎಂಗೆ ಪತ್ನಿ ಚನ್ನಮ್ಮ, ಪುತ್ರ ಭರತ್ ಸಾಥ್ ನೀಡಿದರು.

ಆಸ್ತಿ ಎಷ್ಟಿದೆ?
ಸಿಎಂ 49.70 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 5.98 ಕೋಟಿ ರೂ. (ಅವಿಭಕ್ತ ಕುಟುಂಬದಿಂದ 1.57 ಕೋಟಿ ರೂ.) ಚರಾಸ್ತಿ, 42.15 ಕೋಟಿ ರೂ.(ಅವಿಭಕ್ತ ಕುಟುಂಬದಿಂದ 19.2 ಕೋಟಿ ರೂ.) ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

ಹುಬ್ಬಳ್ಳಿಯ ತಾರಿಹಾಳ ಬಳಿ 2022ರ ಮಾರ್ಚ್‌ 26 ರಂದು 3 ಎಕರೆ ಜಮೀನು ಖರೀದಿಸಿದ್ದಾರೆ. ಒಟ್ಟು 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದು, ಕೈಯಲ್ಲಿ 3 ಲಕ್ಷ ರೂ. ನಗದು ಇದೆ. ಒಟ್ಟು 5.79 ಕೋಟಿ ರೂ. ಸಾಲ ಮಾಡಿದ್ದಾರೆ. ಈ ಪೈಕಿ ಪುತ್ರ ಭರತ್‌ಗೆ 14.74 ಲಕ್ಷ ರೂ, ಪುತ್ರಿ ಸುಗಣಗೆ 2 ಲಕ್ಷ ರೂ. ಸಾಲ ನೀಡಿದ್ದಾರೆ.

Share This Article