ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnata Election 2023) ಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ (Congress) ಗೆಲುವಿನ ನಗೆ ಬೀರಿದೆ. ಇದೀಗ ನನ್ನ ನಿಲುವನ್ನು ಬಹಿರಂಗವಾಗಿ ತಿಳಿಸೋಕೆ ಆಗಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ (Puttarangashetty) ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿತ್ತು. 2008 ರಿಂದಲೂ ಕೂಡ ನಾನು ಶಾಸಕನಾಗಿದ್ದೇನೆ. ಸೋಮಣ್ಣ (V Somanna) ನವರು ಬಂದು ಸ್ಪರ್ಧೆ ಮಾಡಿದ್ರು ಸೋತಿದ್ದಾರೆ. ನಾನು ಅವತ್ತಿಂದ ಹೇಳಿದ್ದೆ ಈ ಚುನಾವಣಾ ಹಣದ ಬಲವಾ ಅಥವಾ ಜನರ ಬಲವಾ ಎಂದು ಅಂದ್ರು. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?
Advertisement
Advertisement
ಜನ ನನಗೆ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ನಾನು ಸಚಿವ ಸ್ಥಾನದ ಬಗ್ಗೆ ಏನು ಮಾತನಾಡಿಲ್ಲ. ಖರ್ಗೆ ನಮ್ಮ ಸಾಹೇಬ್ರು. ಸಾಮಾನ್ಯವಾಗಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ನಮ್ಮ ಸಮುದಾಯದಿಂದ ನಾನೊಬ್ಬನೇ ಶಾಸಕರಾಗಿರುವುದು ಎಂದರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ
Advertisement
ಉಪ್ಪಾರ ಸಮುದಾಯ ಪ್ರತಿನಿಧಿಸುತ್ತೇನೆ, ಸಮ್ಮಿಶ್ರ ಸರ್ಕಾರ ಬಂದಾಗಲೂ ಸಚಿವನಾಗಿದ್ದೆ. 4 ಬಾರಿ ಶಾಸಕನಾಗಿದ್ದೆ. ಸಚಿವ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟಿದ್ದು. ಸಿಎಂ ಯಾರಾಗ್ತಾರೆ ಅನ್ನೋದು ಹೈಕಮಾಂಡ್‍ಗೆ ಬಿಟ್ಟಿದ್ದು. ಹೈಕಮಾಂಡ್ ನಿಲುವಿಗೆ ನಾವೆಲ್ಲ ಬದ್ಧ ಎಂದು ಹೇಳಿದರು.