ಬೆಂಗಳೂರು: ಬಿಜೆಪಿಗೆ (BJP) ಮತ್ತೆ ಸ್ಪಷ್ಟ ಬಹುಮತ ಬರಲಿದೆ. ಬಿಜೆಪಿಯಿಂದ ಯಾರು ಪಕ್ಷ ಬಿಟ್ಟು ಹೋಗಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 8ಕ್ಕೆ ಕೇಂದ್ರ ಸಮಿತಿ ಪಟ್ಟಿ ಪರಿಶೀಲನೆ ಮಾಡಿ ಬಿಡುಗಡೆ ಮಾಡಲಿದೆ. ಹಲವಾರು ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿದ್ದಾರೆ. ಕಳೆದ 3-4 ತಿಂಗಳ ಬೆಳವಣಿಗೆ ಗಮನಿಸಿದಾಗ ಸಂಪೂರ್ಣ ಬಹುಮತ ಬರುವ ಲಕ್ಷಣಗಳಿವೆ ಎಂದರು. ಇದನ್ನೂ ಓದಿ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ
ಕೆಲವು ಕ್ಷೇತ್ರಗಳು ಆಶ್ಚರ್ಯಕರ ಫಲಿತಾಂಶ ಕೊಡಲಿದೆ. ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಆತ್ಮವಿಶ್ವಾಸದಲ್ಲಿದ್ದಾರೆ. ಟಿಕೆಟ್ ಕೊಡುವುದನ್ನು ಕೂಡಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀಡಲಾಗುತ್ತದೆ. ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ, ರಾಜ್ಯ ಮಟ್ಟದಿಂದ ಮಾಹಿತಿ ಪಡೆದು ಗ್ರೌಂಡ್ ರಿಯಾಲಿಟಿ ಮೇಲೆ ಪಟ್ಟಿ ಮಾಡಲಾಗುತ್ತಿದೆ. ಟಿಕೆಟ್ ಹಂಚಿಕೆ ಸರಳವಾಗಿ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ
ಹಲವಾರು ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡುತ್ತೇವೆ. ಕೆಲವು ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಗಳು ಇರಲಿದ್ದಾರೆ ಎಂದರು. ಆಯನೂರು ಸೇರಿ ಹಲವರು ಪಕ್ಷ ಬಿಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಈಗ 125 ಶಾಸಕರಿದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸೀಟು ಸಿಗುವುದಿಲ್ಲ ಎಂದು ಕೆಲವರು ಬಿಟ್ಟು ಹೋಗಿದ್ದಾರೆ ಅಷ್ಟೆ. ಇದರಿಂದ ಬಿಜೆಪಿಯ ಚುನಾವಣೆ (Election) ಮೇಲೆ ಯಾವುದೇ ಎಫೆಕ್ಟ್ ಆಗುವುದಿಲ್ಲ ಮತ್ತು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು. ಇದನ್ನೂ ಓದಿ: ಅಯೋಧ್ಯೆ ದೇವಸ್ಥಾನ ಬಳಿ ವಾಸ್ತವ್ಯ ಹೂಡಿ – ಮನೆಯಿಲ್ಲ ಎಂದಿದ್ದ ರಾಗಾಗೆ ಅರ್ಚಕ ಆಹ್ವಾನ