ಹಾವೇರಿ: ಎಕ್ಸಿಟ್ ಪೋಲ್ (Exit Poll) 100% ಕರೆಕ್ಟ್ ಆಗಿರುವುದಿಲ್ಲ. ರಿಯಲ್ ಫಲಿತಾಂಶ ಬರುವಾಗ ಪ್ಲಸ್, ಮೈನಸ್ ಆಗುತ್ತದೆ. ರಾಜ್ಯದಲ್ಲಿ ಬಿಜೆಪಿಗೆ (BJP) ಸಂಪೂರ್ಣ ಬಹುಮತ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿಯಲ್ಲಿ (Shiggavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಕ್ಸಿಟ್ ಪೋಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಗೆ ಬಹುಮತ ಸಿಗುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆಯಿಲ್ಲ. ನಮ್ಮ ಗ್ರೌಂಡ್ ರಿಪೋರ್ಟ್ನ ಪ್ರಕಾರ ನಮಗೆ ಸಂಪೂರ್ಣ ಬಹುಮತ ಬರುತ್ತದೆ. ಆದರೆ ಮೇ 13ರ ಫಲಿತಾಂಶ ಬರುವ ತನಕ ಕಾದುನೋಡಿ ಎಂದರು. ಇದನ್ನೂ ಓದಿ: Exit Polls : ಕಾಂಗ್ರೆಸ್ಗೆ ಮುನ್ನಡೆ, ಈ ಬಾರಿಯೂ ಅತಂತ್ರ?
ಜೆಡಿಎಸ್ (JDS) ಕಿಂಗ್ಮೇಕರ್ ಆಗುವುದಿಲ್ಲ, ಸಂಪೂರ್ಣ ಬಹುಮತ ಬರುವುದರಿಂದ ನಾವೇ ಕಿಂಗ್ ಮೇಕರ್ ಆಗುತ್ತೇವೆ. ಈ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಅಭ್ಯರ್ಥಿಯಿಂದಲೇ ಚುನಾವಣಾ ಬಹಿಷ್ಕಾರ – ಮತಗಟ್ಟೆಗೆ ಏಜೆಂಟ್ಗಳನ್ನು ನೇಮಿಸದ ವಾಟಾಳ್