ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?

Public TV
1 Min Read
bjp flag

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ರಣಕಣ ಸಿದ್ಧವಾಗಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ (BJP Candidates List) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಆಯಾಮಗಳ ಜೊತೆಗೆ ಜಾತಿವಾರು ಲೆಕ್ಕಾಚಾರದಲ್ಲೂ ಟಿಕೆಟ್ ಬಿಡುಗಡೆ ಮಾಡಿ ಗೆಲುವಿಗೆ ರಣತಂತ್ರ ರೂಪಿಸಿದೆ.

ಜಾತಿವಾರು ಲೆಕ್ಕಾಚಾರ ಏನು?
ಬಿಜೆಪಿಗೆ (BJP) ಲಿಂಗಾಯತ ಸಮುದಾಯದವರೇ ಪ್ರಮುಖ ಗೆಲುವಿನ ಅಸ್ತ್ರ. ಹೀಗಾಗಿ ಈ ಬಾರಿಯೂ ಲಿಂಗಾಯತ ನಾಯಕರಿಗೆ ಹೆಚ್ಚು ಮಣೆ ಹಾಕಲಾಗಿದೆ. ಜೊತೆಗೆ ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

Arun Singh

ಯಾವ ಸಮುದಾಯಕ್ಕೆ ಎಷ್ಟು?
ಬಿಜೆಪಿ ಈ ಬಾರಿ ಲಿಂಗಾಯತ- 52, ಓಬಿಸಿ- 32, ಎಸ್‌ಸಿ- 30, ಎಸ್‌ಟಿ- 16 ಸಮುದಾಯಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

ಅಷ್ಟೇ ಅಲ್ಲದೇ ಕುರುಬ ಸಮುದಾಯದ 7 ಮಂದಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಸಮುದಾಯದ ಸಿಂಧನೂರು ಕ್ಷೇತ್ರದ ಕರಿಯಪ್ಪ, ಕುಷ್ಟಗಿ ಕ್ಷೇತ್ರದ ದೊಡ್ಡನಗೌಡ ಪಾಟೀಲ್, ರಾಮದುರ್ಗದ ಚಿಕ್ಕರೇವಣ್ಣ, ಕೆ.ಆರ್.ಪುರದ ಬೈರತಿ ಬಸವರಾಜು, ಹೊಸಕೋಟೆಯ ಎಂಟಿಬಿ ನಾಗರಾಜು, ಕೋಲಾರದ ವರ್ತೂರು ಪ್ರಕಾಶ್, ಪಿರಿಯಾಪಟ್ಟಣ ಕ್ಷೇತ್ರದ ಸಿ.ಎಚ್.ವಿಜಯ್ ಶಂಕರ್ ಅವರಿಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ: ಬೊಮ್ಮಾಯಿ

Share This Article