ಧಮ್ ಇದ್ರೆ ಡಿಕೆಶಿ ಮೀಸಲಾತಿ ನಿರ್ಧಾರವನ್ನು ವಾಪಸ್ ಪಡೆಯಲಿ – ಯತ್ನಾಳ್ ಸವಾಲ್

Public TV
2 Min Read
BASANGOUDA PATIL YATNAL

ಬೆಂಗಳೂರು: ಧಮ್ ಇದ್ರೆ ಡಿಕೆ ಶಿವಕುಮಾರ್ (D.K.Shivakumar) ಅವರು ಮೀಸಲಾತಿಯನ್ನು ವಾಪಸ್ ಪಡೆಯಲಿ. ತಾಕತ್ ಇದ್ರೆ ಅವರು ಅದನ್ನು ಮಾಡಿ ನೋಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಡಿಕೆಶಿಗೆ ಸವಾಲೆಸೆದಿದ್ದಾರೆ.

ಬೆಂಗಳೂರಿನಲ್ಲಿರುವ (Bengaluru) ಸಿಎಂ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿಯನ್ನು (Reservation) ಕಿತ್ತು ಹಾಕುತ್ತೇವೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ತಾಕತ್ ಇದ್ರೆ ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂಬ ಹೇಳಿಕೆಯನ್ನು ಡಿಕೆಶಿ ಇನ್ನೊಂದು ಸಲ ಹೇಳಲಿ. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಜನ ಸರ್ವನಾಶ ಮಾಡಿಬಿಡುತ್ತಾರೆ ಎಂದರು. ಇದನ್ನೂ ಓದಿ: ಬೇಲೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜಶೇಖರ ಪರ ಮಠಾಧೀಶರ ಲಾಬಿ 

Basangouda Patil Yatnal 1

ಒಕ್ಕಲಿಗರು, ಲಿಂಗಾಯತರು ಈ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಶಕ್ತಿ ಇದ್ದ ಹಾಗೆ. ಅವರೊಂದಿಗೆ ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲರಿಗೂ ಸಾಮಾಜಿಕವಾಗಿ ನ್ಯಾಯ ಸಿಕ್ಕಿದ್ದರಿಂದ ಡಿಕೆಶಿಯವರನ್ನು ಒಕ್ಕಲಿಗರೇ ಸೋಲಿಸುತ್ತಾರೆ. ಅವರು ಅವರ ಬ್ರದರ್ಸ್‌ಗಳಿಗೋಸ್ಕರ  ಈ ರೀತಿ ಹೇಳಿದ್ದಾರೆ. ಅವರು ಮೀಸಲಾತಿ ವಾಪಸ್ ಪಡೆದರೆ ಅವರ ಬ್ರದರ್ಸ್ ಜೊತೆ ಮೆಕ್ಕಾ-ಮದಿನಾಗೆ ಹೋಗಬೇಕಾಗುತ್ತದೆ ಎಂದು ಡಿಕೆಶಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ರಾಜ್ಯದ 3 ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ: ಮುಖ್ಯಮಂತ್ರಿ ಚಂದ್ರು

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಾಗಿದೆ. ಅಲ್ಲದೇ ಲಿಂಗಾಯತರು ಹಾಗೂ ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಾಗಿದೆ. ನಮ್ಮ ದೇಶದ ಪ್ರಧಾನಿ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಮಾರ್ಚ್ 27ನೇ ತಾರೀಕಿನಂದು ಗೆಜೆಟ್ ನೋಟಿಫಿಕೇಷನ್ ಆಗಿದೆ. ಆದ್ದರಿಂದ ಪ್ರಧಾನಿ, ಅಮಿತ್ ಶಾ (Amit Shah) ಹಾಗೂ ನನ್ನ ಸಹೋದರಿ ಶೋಭಾ ಕರಂದ್ಲಾಜೆಯವರಿಗೆ (Shobha Karandlaje) ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ 

Basangouda Patil Yatnal 3

75 ವರ್ಷ ವಯಸ್ಸಾದವರಿಗೆ, ಭ್ರಷ್ಟಾಚಾರದಲ್ಲಿ (Corruption) ತೊಡಗಿದವರಿಗೆ ಮತ್ತು ಒಂದೇ ಕುಟುಂಬದವರಿಗೆ ಚುನಾವಣೆಯಲ್ಲಿ (Election) ಟಿಕೆಟ್ ನೀಡುವುದಿಲ್ಲ ಎಂಬ ನಿರ್ಣಯವನ್ನು ಮಾಡಿ ಮೋದಿ ಹಾಗೂ ಅಮಿತ್ ಶಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆದರೆ ಈ ಬಾರಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಆಪರೇಷನ್ ಕಮಲ ಮಾಡದಿರಲು ಹೈಕಮಾಂಡ್ (High Command) ನಿರ್ಧರಿಸಿದೆ. ಆದ್ದರಿಂದ ನಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಸ್ಥಾಪನೆ- ಐವರು ರೌಡಿಶೀಟರ್‌ಗಳ ಗಡಿಪಾರು

Share This Article