ಚಿಕ್ಕೋಡಿ: ನಾನು ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ, ಹುಕ್ಕೇರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ ಎನ್ನುವುದರ ಮೂಲಕ ಮಾಜಿ ಸಚಿವ ಎ.ಬಿ ಪಾಟೀಲ್ (AB Patil) ಕಾರ್ಯಕರ್ತಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎ.ಬಿ ಪಾಟೀಲ್ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕೇವಲ ಊಹಾಪೋಹವಾಗಿದೆ. ಈ ಬಾರಿ ನಾನು ಹುಕ್ಕೇರಿ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಹುಕ್ಕೇರಿ ಮತಕ್ಷೇತ್ರದ ಆಕಾಂಕ್ಷಿಗಳ ಮನವೊಲಿಕೆ ಮಾಡಿದ್ದೇವೆ. ಯಾರು ಕೂಡ ನನ್ನ ಸ್ಪರ್ಧೆಗೆ ವಿರೋಧ ಮಾಡಿಲ್ಲ. ಹೀಗಾಗಿ ಈ ಬಾರಿ ನನ್ನ ಸ್ಪರ್ಧೆ ಹುಕ್ಕೇರಿಯಿಂದ ಖಚಿತವಾಗಿದೆ ಎಂದರು. ಇದನ್ನೂ ಓದಿ: ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು: ಜಮೀರ್
Advertisement
Advertisement
ನಾಳೆ ಹುಕ್ಕೇರಿ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಆಯೋಜನೆ ಮಾಡಲಾಗಿದೆ. ಹುಕ್ಕೇರಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಾಯಂಕಾಲ 6 ಗಂಟೆಗೆ ಪ್ರಜಾಧ್ವನಿ ಸಮಾವೇಶ ಜರುಗಲಿದೆ. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಕಾಂಗ್ರೆಸ್ (Congress) ನಾಯಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್