ಹಾಸನ/ಬೆಳಗಾವಿ: ಮತ (Vote) ಚಲಾಯಿಸಲು ಮತಗಟ್ಟೆಗೆ ಬಂದಿದ್ದ ವ್ಯಕ್ತಿ ಹಾಗೂ ಮಹಿಳೆ ಎರಡು ಪ್ರತ್ಯೇಕ ಮತದಾನ ಕೇಂದ್ರದಲ್ಲಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಮತ್ತು ಬೆಳಗಾವಿಯಲ್ಲಿ (Belagavi) ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಜಯಣ್ಣ (49) ಮತದಾನ ಮಾಡಿ ಹೊರಬಂದ ಬಳಿಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಚುನಾವಣೆ (Election) ಹಿನ್ನೆಲೆ ಇಂದು ಮತದಾನ ನಡೆಯುತ್ತಿದ್ದು, ಜಯಣ್ಣ ಸಹಾ ಮತದಾನದಲ್ಲಿ ಭಾಗಿಯಾಗಿದ್ದರು. ಮತದಾನ ಮಾಡಿ ಹೊರಬಂದ ಅವರು ಮತದಾನ ಕೇಂದ್ರದ ಆವರಣದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates
Advertisement
Advertisement
ಬೆಳಗಾವಿಯಲ್ಲಿ ಮತಚಲಾಯಿಸಲು ಬಂದಿದ್ದ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಸವದತ್ತಿ (Savadatti) ತಾಲೂಕಿನ ಯರಝರ್ವಿ ತಾಲೂಕಿನ ಮತಗಟ್ಟೆಯಲಿ ಈ ಘಟನೆ ಸಂಭವಿಸಿದ್ದು, ಯರಝರ್ವಿ ಗ್ರಾಮದ ಪಾರವ್ವ ಈಶ್ವರ್ ಸಿದ್ನಾಳ (68) ಮತ ಚಲಾಯಿಸಲೆಂದು ಮತಗಟ್ಟೆಗೆ ಬಂದಿದ್ದರು. ಮತದಾನಕ್ಕೂ ಮುನ್ನವೇ ಮತಗಟ್ಟೆಯ ಆವರಣದಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: Karnataka Election 2023: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯಿಂದ ಮತದಾನ