ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) 2ನೇ ದಿನವೂ ಮೋದಿ ವರ್ಚಸ್ಸು ಜೋರಾಗಿದೆ. ನ್ಯೂ ತಿಪ್ಪಸಂದ್ರದಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ಆರಂಭವಾಗಿದೆ.
6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ರೋಡ್ ಶೋ ಸಾಗಲಿದೆ. ಮಹಾದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗುತ್ತಿದೆ. ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ನಮಸ್ಕರಿಸಿದ ಮೋದಿ ರೋಡ್ ಶೋ ಆರಂಭಿಸಿದ್ದಾರೆ.
Advertisement
Advertisement
ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಯುತ್ತಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸುತ್ತಿದ್ದಾರೆ. ಮೋದಿಯನ್ನು ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದಾರೆ. ರಸ್ತೆಯುದ್ದಕ್ಕೂ ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸ ಪಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ – ಬಿಜೆಪಿ ಲೆಕ್ಕಾಚಾರ ಏನು?
Advertisement
Advertisement
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ಹೂಮಳೆ ಸುರಿಸಿ ಸಂಭ್ರಮಿಸುತ್ತಿದ್ದಾರೆ. ಜನರೆಡೆಗೆ ಮೋದಿಯವರು ಹೂ ಎಸೆದು, ಜನರತ್ತ ಕೈಬೀಸುತ್ತಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ.