ರಾಯಚೂರು: ಸಿದ್ದರಾಮಯ್ಯ (Siddaramaiah) ಅವರಿಗೆ ತಾಕತ್ತಿದ್ರೆ ಕಾಂಗ್ರೆಸ್‌ನಿಂದ (Congress) ಹೊರಬಂದು ಸ್ವಂತ ಪಕ್ಷ ಕಟ್ಟಿ ಐದು ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸವಾಲ್ ಹಾಕಿದ್ದಾರೆ.
ರಾಯಚೂರಿನಲ್ಲಿಂದು (Raichur) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಪಕ್ಷ ನಾಲ್ಕೈದು ಜಿಲ್ಲೆಗೆ ಸೀಮಿತ ಅಂತಾರೆ, ತಾಕತ್ತಿದ್ರೆ ಸಿದ್ದರಾಮಯ್ಯ (Siddaramaiah) ಸ್ವಂತ ಪಕ್ಷ ಕಟ್ಟಿ ನಾಲ್ಕೈದು ಸೀಟು ಗೆದ್ದುಕೊಂಡು ಬರಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲೆನಾಡಿನ ಕುವರಿ
Advertisement
Advertisement
ನಮ್ಮ ಪಕ್ಷದಿಂದ ಬೆಳೆದು ಹೋಗಿ, ಇನ್ಯಾವುದೋ ಪಕ್ಷದಲ್ಲಿದ್ದುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯಗೆ ಚಾಲೆಂಜ್ ಹಾಕ್ತೀನಿ ಕಾಂಗ್ರೆಸ್ (Congress) ಪಕ್ಷ ಬಿಟ್ಟು ಬಂದು, ಪಕ್ಷ ಕಟ್ಟಿ 5 ಸೀಟು ಗೆದ್ದುಕೊಂಡು ಬರಲಿ. ನಾವೆಲ್ಲ ಇದ್ದಾಗಲೇ 58 ಸೀಟು ಬಂದಿತ್ತು ಅಂತಾರೆ, ಅವರು ಹೋದಾಗಲೆ ಏಕಾಂಗಿ ಹೋರಾಟದಲ್ಲಿ 40 ಸೀಟು ತಂದಿದ್ದೇವೆ. ಈ ಚುನಾವಣೆಯಲ್ಲಿ (Election) ರಾಜ್ಯಾದ್ಯಂತ ಪಕ್ಷಕ್ಕೆ ಶಕ್ತಿ ಜನ ಕೊಡ್ತಾರೆ. ಸಿದ್ದರಾಮಯ್ಯ ಸವಾಲು ಸ್ವೀಕಾರ ಮಾಡಿಕೊಂಡು ಹೊರಟಿದ್ದೇನೆ. ಬಿಜೆಪಿಯವರು ಪರ್ಯಾಯ ಪಕ್ಷವಾಗಿ ಬೆಳೆಯುತ್ತೇವೆ ಎಂದು ಬೀಗಿದ್ದಾರೆ ಎಂದರು.
Advertisement
Advertisement
‘ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ’ ಎಂಬ ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಹೆಚ್‌ಡಿಕೆ, ತಾಯಿ ಚಾಮುಂಡೇಶ್ವರಿಯೇ ಅವರ ಮಗನ ಬಾಯಿಂದ ಹೇಳಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಲಿ, ಅಲ್ಲೇ ಅವರ ಕೊನೆ ಚುನಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಧರ್ಮದ ಹೆಸರಲ್ಲಿ ಸ್ಥಾಪನೆಯಾದ ರಾಷ್ಟ್ರ – ಅಲ್ಲಾಹನೇ ಅಭಿವೃದ್ಧಿಪಡಿಸ್ತಾನೆ ಎಂದ ಹಣಕಾಸು ಸಚಿವ
ಬಿಜೆಪಿಗೆ (BJP) ಇವತ್ತು ಕಾಂಗ್ರೆಸ್ ಪಕ್ಷ ಪರ್ಯಾಯ ಪಕ್ಷವಲ್ಲ. ಆಯಾ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳೇ ಪರ್ಯಾಯವಾಗಿವೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮತ್ತೇ ಚೇತರಿಸಿಕೊಳ್ಳಲು ಆಗಲ್ಲ. ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಉಳಿಸಲು ಪ್ರಾದೇಶಿಕ ಪಕ್ಷಗಳು ಒಂದುಗೂಡಬೇಕಿದೆ. ಅದರಲ್ಲಿ ಜೆಡಿಎಸ್ ಪಕ್ಷವೂ ಇರುತ್ತೆ ಅದನ್ನ ಹೇಳಲು ಹಿಂಜರಿಕೆಯಿಲ್ಲ. ರಾಯಚೂರಿನಲ್ಲಿ ಕಳೆದ ನಾಲ್ಕು ದಿನ ಪ್ರಚಾರ ಮುಗಿದಿದೆ. ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಜನತಾದಳದ ಮತದಾರರ ಭದ್ರಕೋಟೆ ರಾಯಚೂರು. ನಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಪಕ್ಷ ವಿಸರ್ಜನೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, `ಈ ಬಾರಿ ನಾಡಿನ ಜನತೆ ನನಗೆ ಆಶೀರ್ವಾದ ಮಾಡಿದ ಮೇಲೆ ಬಡ ಕುಟುಂಬಗಳ ಬಡತನ ಹೋಗಲಾಡಿಸದಿದ್ರೆ, 5 ವರ್ಷ ಆಡಳಿತ ನಡೆಸಿದ ಮೇಲೆ ಕೆಲಸ ಮಾಡಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡ್ತಿನಿ ಅಂದಿದ್ದೆ. ಡಿಕೆಶಿಗೆ ನಾನು ಮಾತನಾಡಿದ್ದು ಅರ್ಥ ಆಗಿಲ್ಲ. ಯಾರೋ ಬರೆದುಕೊಟ್ಟದನ್ನ ಓದೋರು ಅವರು. ನಾನು ಮಾತನಾಡಿದ್ದು ಮತ್ತೊಮ್ಮೆ ನೋಡಲಿ ಎಂದು ಕುಟುಕಿದ್ದಾರೆ.
200 ಯುನಿಟ್ ಉಚಿತ, 2 ಸಾವಿರ ರೂ ಖಚಿತ ಹೇಳಿದ್ರೆ ಇನ್ನೆರೆಡು ಸೀಟ್ ಬರುತ್ತೆ. ಅದನ್ನ ಬಿಟ್ಟು ಕುಮಾರಸ್ವಾಮಿ ಭಜನೆ ಮಾಡಿದರೆ ಬರೋ ಸೀಟು ನಿಮಗೆ ಬರಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k