ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕೋಟೆಯಲ್ಲಿ ಈ ಬಾರಿ ಕಮಲ ಅರಳಿದೆ. ಮೊದಲ ಬಾರಿಗೆ ಹಾಸನದಿಂದ ಸ್ಪರ್ಧಿಸಿದ್ದ ಪ್ರೀತಂ ಗೌಡ ಜಯಗಳಿಸಿದ್ದಾರೆ.
ಬಿಜೆಪಿಯ ಪ್ರೀತಮ್ ಗೌಡ 63,334 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ಎಸ್.ಹೆಚ್.ಪ್ರಕಾಶ್ 50342 ಮತ ಮತ್ತು ಕಾಂಗ್ರೆಸ್ ನ ಹೆಚ್.ಕೆ.ಮಹೇಶ್ 38,101 ಮತಗಳನ್ನು ಪಡೆದಿದ್ದಾರೆ.
Advertisement
ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ರೇವಣ್ಣ 1,01,104 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಾಗೂರು ಮಂಜೇಗೌಡ 62,316 ಮತಗಳನ್ನು ಪಡೆಯುವ ಮೂಲಕ ರೇವಣ್ಣ 38,788 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Advertisement
ಶ್ರವಣಬೆಳಗೊಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್ ಪುಟ್ಟೇಗೌಡ, ಬಿಜೆಪಿಯಿಂದ ಶಿವನಂಜೇಗೌಡ ಹಾಗೂ ಜೆಡಿಎಸ್ ನಿಂದ ಸಿ.ಎನ್ ಬಾಲಕೃಷ್ಣ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಸಿ.ಎನ್. ಬಾಲಕೃಷ್ಣ 1,05,516 ಗೆಲುವು ಸಾಧಿಸಿದ್ದು, ಸಿ.ಎಸ್ ಪುಟ್ಟೇಗೌಡ 52,504 ಮತ ಮತ್ತು ಶಿವನಂಜೇಗೌಡ 7,506 ಮತಗಳನ್ನು ಪಡೆದಿದ್ದಾರೆ.
Advertisement
Advertisement
ಸಕಲೇಶಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಡಾ.ಸಿದ್ದಯ್ಯ, ಬಿಜೆಪಿಯಿಂದ ನಾರ್ವೆ ಸೋಮಶೇಖರ್ ಹಾಗೂ ಜೆಡಿಎಸ್ ನಿಂದ ಹೆಚ್.ಕೆ.ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದರು. ಹೆಚ್.ಕೆ. ಕುಮಾರಸ್ವಾಮಿ 62,262 ಮತ ಪಡೆದು ಗೆಲುವು ಸಾದಿಸಿದ್ದಾರೆ. ನಾರ್ವೆ ಸೋಮಶೇಖರ್ 57,320 ಮತ ಮತ್ತು ಕಾಂಗ್ರೆಸ್ ನ ಡಾ.ಸಿದ್ದಯ್ಯ 36,895 ಮತಗಳನ್ನು ಪಡೆದಿದ್ದಾರೆ.
ಬೇಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಕೀರ್ತನಾ ರುದ್ರೇಶ್ ಗೌಡ, ಬಿಜೆಪಿಯಿಂದ ಹೆಚ್.ಕೆ.ಸುರೇಶ್ ಹಾಗೂ ಜೆಡಿಎಸ್ ನಿಂದ ಲಿಂಗೇಶ್ ಅವರು ಸ್ಪರ್ಧಿಸಿದ್ದರು. ಜೆಡಿಎಸ್ ನಿಂದ ಲಿಂಗೇಶ್ 19,984 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಕೀರ್ತನಾ ರುದ್ರೇಶ್ ಗೌಡ್ 39,554 ಮತ್ತು ಬಿಜೆಪಿಯ ಹೆಚ್.ಕೆ.ಸುರೇಶ್ 44,158 ಮತಗಳನ್ನು ಪಡೆದಿದ್ದಾರೆ. ಲಿಂಗೇಶ್ ಒಟ್ಟು 64,122 ಮತಗಳನ್ನು ಪಡೆದಿದ್ದಾರೆ.
ಅರಸೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಜೆ.ಬಿ. ಶಶಿಧರ್, ಬಿಜೆಪಿ ಅಭ್ಯರ್ಥಿ ಮರಿಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ 93,986 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ನ ಶಶಿಧರ್ 50,297 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಶಿವಲಿಂಗೇಗೌಡ ಸುಮಾರು 43,689 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಎ.ಮಂಜು, ಬಿಜೆಪಿಯಿಂದ ಯೋಗರಮೇಶ್ ಹಾಗೂ ಜೆಡಿಎಸ್ ನಿಂದ ಎ.ಟಿ.ರಾಮಸ್ವಾಮಿ ಅವರು ಸ್ಪರ್ಧಿಸಿದ್ದರು. ಜೆಡಿಎಸ್ ನಿಂದ ಎ.ಟಿ.ರಾಮಸ್ವಾಮಿ 77,715 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಎ.ಮಂಜು 67,095 ಮತ ಮತ್ತು ಬಿಜೆಪಿಯ ಯೋಗಾರಮೇಶ್ 21,333 ಮತಗಳನ್ನು ಪಡೆದಿದ್ದಾರೆ.