ಬೆಂಗಳೂರಿನಲ್ಲಿ ಬಿರುಸುಗೊಂಡ ಮತದಾನ – ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌

Public TV
1 Min Read
udupi election vote

ಬೆಂಗಳೂರು: ಮತಹಬ್ಬಕ್ಕೆ ಕರ್ನಾಟಕದಲ್ಲಿ (Karnataka Election) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು ರಾಜ್ಯದಲ್ಲಿ 20.99 % ಮತದಾನ ನಡೆದಿದೆ.

ಉಡುಪಿ 30.26%, ದಕ್ಷಿಣ ಕನ್ನಡ 28.46%, ಕೊಡಗು 26.49% ಉತ್ತರ ಕನ್ನಡ 25.46% ಮತದಾನ ನಡೆದಿದೆ. ಇದನ್ನೂ ಓದಿ: Karnataka Election 2023 Live – ಕರ್ನಾಟಕದಲ್ಲಿ 11 ಗಂಟೆವರೆಗೆ 20.99% ಮತದಾನ

 

ಪ್ರತಿ ಬಾರಿಯೂ ಬೆಂಗಳೂರಿನಲ್ಲಿ ಮತದಾನ ಕಡಿಮೆ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿರಿಯ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದರೆ, ಯುವ ಜನತೆ ಸಂಖ್ಯೆ ಕಡಿಮೆಯಿದೆ. ಮಧ್ಯಾಹ್ನದ ಬಳಿಕ ಯುವಜನತೆ ಮತಗಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಮಧ್ಯಾಹ್ನದ ಬಳಿಕ ಬೆಂಗಳೂರಿನಲ್ಲಿ ಮಳೆ ಬರುವ ಸಾಧ್ಯತೆ ಇರುವ ಕಾರಣ ಬಹಳಷ್ಟು ಮಂದಿ ಬೆಳಗ್ಗೆ ಮತ ಹಾಕಲು ಆಸಕ್ತಿ ತೋರಿಸಿದ್ದಾರೆ.

 

ವೀಕೆಂಡ್‌ನಲ್ಲಿ ಚುನಾವಣೆ ದಿನಾಂಕ ಇದ್ದರೆ ಪ್ರತಿ ಬಾರಿಯೂ ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದ ಮತದಾನ ನಡೆಯುತ್ತಿತ್ತು. ಆದರೆ ಈ ಬಾರಿ ವಾರದ ಮಧ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಹೆಚ್ಚಿನ ಮತದಾನ ನಡೆಯುವ ಸಾಧ್ಯತೆಯಿದೆ.

ಎಲ್ಲಿ ಎಷ್ಟು?
ಬೆಂಗಳೂರು ಕೇಂದ್ರ – 19.30%
ಬೆಂಗಳೂರು ಉತ್ತರ – 18.34%
ಬಿಬಿಎಂಪಿ ದಕ್ಷಿಣ -19.18%
ಬೆಂಗಳೂರು ಗ್ರಾಮಾಂತರ – 20.13%
ಬೆಂಗಳೂರು ನಗರ – 17.72%

Share This Article