ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಸೋಂಕಿತ 6 ಜನ ರೋಗಿಗಳು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ್ಕೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಏಕೆಂದರೆ ಬುಧವಾರ ಒಂದೇ ದಿನದಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು ದೃಢಪಟ್ಟಿದೆ. ಜೊತೆಗೆ 19 ಜನರಿಗೆ ಸೋಂಕು ತಗುಲಿದೆ.
ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಹಾಗೂ ಚಿಕ್ಕಬಳ್ಳಾಪುರ ನಿವಾಸಿ 65 ವರ್ಷದ ರೋಗಿ-250 ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅವರು ಕೊರೊನಾ ವೈರಸ್‍ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇಂದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Advertisement
Advertisement
ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿ:
* ಬೆಂಗಳೂರು ನಗರ – 71 ಜನರಿಗೆ ಸೋಂಕು (ಗುಣಮುಖ- 35, ಸಕ್ರಿಯ- 34, ಸಾವು- 02)
* ಮೈಸೂರು – 58 ಜನರಿಗೆ ಸೋಂಕು (ಗುಣಮುಖ- 12, ಸಕ್ರಿಯ- 46)
* ಬೆಳಗಾವಿ – 19 ಜನರಿಗೆ ಸೋಂಕು (ಸಕ್ರಿಯ- 18, ಸಾವು- 01)
Advertisement
Advertisement
ಹಾಟ್‍ಸ್ಪಾಟ್ ಜಿಲ್ಲೆ ವಿತ್ ಕ್ಲಸ್ಟರ್:
* ದಕ್ಷಿಣ ಕನ್ನಡ – 11 ಮಂದಿಗೆ ಕೊರೊನಾ (ಗುಣಮುಖ- 08, ಸಕ್ರಿಯ- 03)
* ಬೀದರ್ – 13 ಮಂದಿಗೆ ಕೊರೊನಾ (ಸಕ್ರಿಯ- 13)
* ಕಲಬುರಗಿ – 17 ಮಂದಿಗೆ ಕೊರೊನಾ (ಗುಣಮುಖ- 02, ಸಕ್ರಿಯ- 12 ಸಾವು- 03)
* ಬಾಗಲಕೋಟೆ – 14 ಮಂದಿಗೆ ಕೊರೊನಾ (ಸಕ್ರಿಯ- 13, ಸಾವು- 01)
* ಧಾರವಾಡ – 6 ಮಂದಿಗೆ ಕೊರೊನಾ (ಗುಣಮುಖ-01, ಸಕ್ರಿಯ- 05)
ನಾನ್ ಹಾಟ್‍ಸ್ಪಾಟ್‍ಗಳು:
* ಬಳ್ಳಾರಿ – 6 ಜನರಿಗೆ ಸೋಂಕು (ಸಕ್ರಿಯ- 06)
* ಮಂಡ್ಯ – 8 ಜನರಿಗೆ ಸೋಂಕು (ಸಕ್ರಿಯ- 08)
* ಬೆಂಗಳೂರು ಗ್ರಾಮಾಂತರ – 12 ಜನರಿಗೆ ಸೋಂಕು (ಸಕ್ರಿಯ- 12)
* ದಾವಣಗೆರೆ- 2 ಜನರಿಗೆ ಸೋಂಕು (ಗುಣಮುಖ- 02)
* ಉಡುಪಿ- 3 ಜನರಿಗೆ ಸೋಂಕು (ಗುಣಮುಖ- 02, ಸಕ್ರಿಯ- 01)
* ಗದಗ- 01 ಜನರಿಗೆ ಸೋಂಕು (ಸಾವು- 01)
* ತುಮಕೂರು- 2 ಜನರಿಗೆ ಸೋಂಕು (ಸಾವು- 01, ಸಕ್ರಿಯ- 01)
* ವಿಜಯಪುರ – 10 ಜನರಿಗೆ ಸೋಂಕು (ಸಕ್ರಿಯ- 09, ಸಾವು- 01)
* ಕೊಡಗು- 01 ಜನರಿಗೆ ಸೋಂಕು (ಗುಣಮುಖ, ಮತ್ತೆ ದಾಖಲು)
* ಚಿಕ್ಕಬಳ್ಳಾಪುರ – 13 ಜನರಿಗೆ ಸೋಂಕು (ಗುಣಮುಖ- 8, ಸಕ್ರಿಯ- 03, ಸಾವು- 02)
* ಉತ್ತರ ಕನ್ನಡ – 11 ಜನರಿಗೆ ಸೋಂಕು (ಗುಣಮುಖ- 08, ಸಕ್ರಿಯ- 03)
ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಗಳ ವ್ಯಾಪ್ತಿಗೆ ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಮಗಳೂರು ಬರುತ್ತವೆ.