ಬೆಂಗಳೂರು: ಕ್ವಾರಂಟೈನ್ ನಲ್ಲಿರುವ ಹೊಂಗಸಂದ್ರದ ಬಿಹಾರಿಗಳು ಸಿಕ್ಕಾಪಟ್ಟೆ ಬೇಡಿಕೆ ಇಡುತ್ತಿದ್ದು, ಇವರ ಬೇಡಿಕೆ ಕೇಳಿ ಬಿಬಿಎಂಪಿ ಸಿಬ್ಬಂದಿ ರೋಸಿ ಹೋಗಿದ್ದಾರೆ.
ಹೊಂಗಸಂದ್ರ- ಎಲೆಕ್ಟ್ರಾನಿಕ್ ಸಿಟಿ ಮಧ್ಯ ಭಾಗದಲ್ಲಿ ಬರುವ ಮಣಿಪಾಲ್ ಕೌಂಟಿ ಹೋಟೆಲ್ ನಲ್ಲಿ ಬಿಹಾರಿ ಮೂಲದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈಗ ಟಿವಿ ಹಾಕಿಸಿ ಊಟ ಬೇರೆ ಕೊಡಿ ಎಂದು ಬಿಹಾರಿಗಳು ದಿನಕ್ಕೊಂದು ಬೇಡಿಕೆ ಇಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಈ ಬೇಡಿಕೆಗೆ ರೋಸಿ ಹೋದ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಕೌನ್ಸಿಲಿಂಗ್ ಮಾಡಿಸಿದ್ದರು. ಈಗ ಹೆಚ್ಚುವರಿ ಪೊಲೀಸ್ ಭದ್ರತೆಯ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
Advertisement
ಬಿಹಾರಿ ಕಾರ್ಮಿಕನಿಂದ 29 ಮಂದಿಗೆ ಸೋಂಕು ಹರಡಿದ್ದು, ಸೋಂಕಿತರ ಜೊತೆ ಸಂಪರ್ಕ ಹೊಂದಿರುವ 212 ಮಂದಿಯನ್ನು ಕ್ವಾರಂಟೈನ್ ಮಾಡಿ, ಮೂರು ಹೊತ್ತು ಊಟ, ಕುಡಿಯಲು ನೀರಿನ ಬಾಟಲ್ ಸೇರಿದಂತೆ ಬಿಬಿಎಂಪಿ ಎಲ್ಲ ವ್ಯವಸ್ಥೆ ಮಾಡಿದೆ.
Advertisement
ಹೊಂಗಸಂದ್ರದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಕ್ವಾರಂಟೈನ್ ಮಾಡಲಾದ 212 ಮಂದಿಯಲ್ಲಿ ಪ್ರಾಥಮಿಕ 175 ಹಾಗೂ 63 ಜನರನ್ನು ದ್ವಿತೀಯ ಸಂಪರ್ಕಿತರು ಎಂದು ಗುರುತಿಸಿಲಾಗಿದ್ದು, ಯಾರಿಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ.