ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 253 ಜನರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. 611 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
ಇದುವರೆಗೆ 39,19,766 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 6805 ಜನರು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಇಲ್ಲಿವರೆಗೂ 6,805 ಜನರಿಗೆ ಕೊರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ಇಂದು ರಾಜ್ಯದಲ್ಲಿ ಶೂನ್ಯ ಮರಣ ಪ್ರಕರಣ ದಾಖಲಾಗಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.3.71 ಇದ್ದು, ಮೃತರ ಪ್ರಮಾಣ ಶೇ.0.00 ಇದೆ. ಇದನ್ನೂ ಓದಿ: ಇಂದಿರಾಗಾಂಧಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದ್ರು: ಬೊಮ್ಮಾಯಿ
Advertisement
Advertisement
ಇಂದು 60,710 ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒಟ್ಟು 6,805 ಸ್ಯಾಂಪಲ್(ಆರ್‌ಟಿಪಿಸಿಆರ್ 4,213 + 2,592 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
ಹೆಲ್ತ್ ಬುಲೆಟಿನ್ ವರದಿಗಳ ಪ್ರಕಾರ ಬೆಂಗಳೂರು ನಗರ ಒಂದರಲ್ಲೇ 236 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ಗ್ರಾಮಾಂತರ 02, ಬೀದರ್ 01, ದಕ್ಷಿಣ ಕನ್ನಡ 02, ಧಾರವಾಡ 01, ಕಲಬುರಗಿ 02, ಕೋಲಾರ 2, ಮಂಡ್ಯ 01, ಮೈಸೂರು 01, ರಾಮನಗರ 02, ತುಮಕೂರು 01, ಉಡುಪಿ 2 ಮತ್ತು ಉತ್ತರ ಕನ್ನಡ 02 ಕೊರೊನಾ ಪ್ರಕರಣ ಪತ್ತೆಯಾಗಿದೆ.