ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದು, 60 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 63 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೊಂಡಿದ್ದಾರೆ
Advertisement
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 57 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಶೂನ್ಯ ಮರಣ ಪ್ರಮಾಣ ಕಾಣಿಸಿಕೊಂಡಿದೆ. ಇಂದು 8,263 ಜನರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಶೂನ್ಯ ಮರಣ ಪ್ರಮಾಣ ಇಂದು ಸಹ ದಾಖಲಾಗಿದೆ. ಕಳೆದ ಹಲವು ವಾರಗಳಿಂದ ಕೊರೊನಾ ಸೋಂಕು ಜನರ ಮೇಲೆ ಅಷ್ಟು ಪರಿಣಾಮಕಾರಿಯಾಗಿ ಬಿರುತ್ತಿಲ್ಲವೆಂಬುದಕ್ಕೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ
Advertisement
Advertisement
0.72% ಕೋವಿಡ್-19 ಖಚಿತ ಸೋಂಕಿನ ಪ್ರಮಾಣ ಕಾಣಿಸಿಕೊಂಡಿದ್ದು, 0.00% ಮರಣ ಪ್ರಮಾಣ ದಾಖಲಾಗಿದೆ. ರಾಜ್ಯದಲ್ಲಿ ಇಲ್ಲಿವರೆಗೂ 1,676 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 7,208 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 8,263 ಸ್ಯಾಂಪಲ್ (ಆರ್‌ಟಿಪಿಸಿಆರ್ 6,673 + 1,590 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 57, ಚಿತ್ರದುರ್ಗ 01, ಧಾರವಾಡ 01, ವಿಜಯಪುರ 01 ಕೊರೊನಾ ಸೋಂಕು ಕಾಣಿಸಿಕೊಂಡಿದೆ. 26 ಜಿಲ್ಲೆಗಳು ಸೇಫ್ ಆಗಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು