ಬೆಂಗಳೂರು: ಪೇಸಿಎಂ (PayCM) ಪರೀಕ್ಷೆ (Exam) ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು. ಬಿಜೆಪಿ (BJP) ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% (Commission) ಕೊಡಲೇಬೇಕು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
Advertisement
ಟ್ವೀಟ್ನಲ್ಲಿ ಏನಿದೆ?
40% ಕಮಿಷನ್ಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಕಮಿಷನ್ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ. ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? ಇದನ್ನೂ ಓದಿ: ಶಾಲೆ ಕ್ಲೋಸ್ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ: ಬಿ.ಸಿ ನಾಗೇಶ್
Advertisement
Advertisement
40% ಕಮಿಷನ್ಗಾಗಿ ಸರ್ಕಾರದ್ದು “ಜಾತ್ಯತೀತ ಭ್ರಷ್ಟಾಚಾರ” ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ. ಪೇಸಿಎಂ ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು! ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಲೇಬೇಕು! ನಿನ್ನೆ ಬಿಜೆಪಿಯವರು ಕಳಿಸಿದ ಬಸ್ಸು “ಡಕೋಟಾ ಇಂಜಿನ್ ಸರ್ಕಾರ, ಬ್ರೇಕ್ ಇಲ್ಲದ ಭ್ರಷ್ಟಾಚಾರ” ಎಂದು ರೋಧಿಸುತ್ತಿತ್ತು! ಕರ್ನಾಟಕ ಈಗ ಪೇಸಿಎಂ ಮುಕ್ತ ರಾಜ್ಯವಾಗಬೇಕಿದೆ ಎಂದು ಕಾಂಗ್ರೆಸ್ ಆಶಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕರಾಟೆ ಕ್ಲಾಸ್ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ