ಬೆಂಗಳೂರು: ಕೊರೊನಾ ಸೋಂಕಿತರ ಹಿತ ಕಾಪಾಡುವಲ್ಲಿ ಆದ ವೈಫಲ್ಯವನ್ನು ಸರ್ಕಾರ ಒಪ್ಪಿದೆ. ಬೆಡ್, ಚಿಕಿತ್ಸೆ, ಆಕ್ಸಿಜನ್, ಔಷಧ ನೀಡುವಲ್ಲಿ ಸೋತಿದ್ದಲ್ಲದೆ ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನೂ ನಿಯಂತ್ರಿಸದಿರುವುದು ಖಾಸಗಿ ಆಸ್ಪತ್ರೆಗಳ ಲಾಬಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ ಎಂಬ ಪ್ರಶ್ನೆ ಮೂಡುತ್ತಿದೆ. ಸಚಿವ ಸುಧಾಕರ್ ಅವರೇ ಉತ್ತರಿಸಿ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಕರೋನಾ ಸೋಂಕಿತರ ಹಿತ ಕಾಪಾಡುವಲ್ಲಿ ಆದ ವೈಫಲ್ಯವನ್ನ ಸರ್ಕಾರ ಒಪ್ಪಿದೆ.
ಬೆಡ್, ಚಿಕಿತ್ಸೆ, ಆಕ್ಸಿಜನ್, ಔಷಧ ನೀಡುವಲ್ಲಿ ಸೋತಿದ್ದಲ್ಲದೆ ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನೂ ನಿಯಂತ್ರಿಸದಿರುವುದು ಖಾಸಗಿ ಆಸ್ಪತ್ರೆಗಳ ಲಾಭಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ ಎಂಬ ಪ್ರಶ್ನೆ ಮೂಡುತ್ತದೆ.@mla_sudhakar ಅವರೇ ಉತ್ತರಿಸಿ.#ಸೋಂಕಿತಸರ್ಕಾರ pic.twitter.com/N2PDERnr1r
— Karnataka Congress (@INCKarnataka) October 26, 2021
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸೋತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ರಾಜ್ಯ ಸರ್ಕಾರ ಮೆಡಿಕಲ್ ಮಾಫಿಯಾ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
ಟ್ವೀಟ್‍ನಲ್ಲೇನಿದೆ..?
ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ರಾಜ್ಯದ `ಸಕಾಲ’ ಯೋಜನೆ ಕೇಂದ್ರ ಸರ್ಕಾರದಿಂದಲೂ ಪ್ರಶಂಸೆ ಪಡೆದಿತ್ತು. ಆದರೆ ಈಗ ಲಕ್ಷಾಂತರ ಅರ್ಜಿಗಳು ಕಾಲಮಿತಿ ಮೀರಿದ ಮೇಲೂ ಕಡತದಲ್ಲೇ ಕೊಳೆಯುತ್ತಿದ್ದು ಯೋಜನೆಗೆ ಗ್ರಹಣ ಬಡಿದಿದೆ ಎಂದು ಕಾಂಗ್ರೆಸ್ ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: ಡಿಕೆಶಿ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ಧ: ಬಿಜೆಪಿ ವ್ಯಂಗ್ಯ
ಸರ್ಕಾರ ಕೆಲಸವೇ ಮಾಡುತ್ತಿಲ್ಲ,
ಕೆಲಸ ನಿಲ್ಲುವ ಮಾತೆಲ್ಲಿ CM ಸಾಹೇಬ್ರೇ?
◆ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿಲ್ಲ
◆ಮನೆ ನಿರ್ಮಿಸಿ ಕೊಡಲಿಲ್ಲ
◆ಬೆಳೆ ಸಮೀಕ್ಷೆ ಮಾಡಲಿಲ್ಲ
◆ಕೋವಿಡ್ ಮೃತರಿಗೆ ಪರಿಹಾರವಿಲ್ಲ
◆ಕಾರ್ಮಿಕರಿಗೆ ₹2000 ಕೈ ಸೇರಿಲ್ಲ
◆ಬೆಲೆ ಏರಿಕೆ ನಿಯಂತ್ರಿಸಲಿಲ್ಲ
ಇನ್ಯಾವ ಕೆಲಸ ಮಾಡುತ್ತಿದೆ ನಿಮ್ಮ ಸರ್ಕಾರ? pic.twitter.com/jua4HZSt4C
— Karnataka Congress (@INCKarnataka) October 26, 2021
ಸರ್ಕಾರ ಕೆಲಸವೇ ಮಾಡುತ್ತಿಲ್ಲ, ಕೆಲಸ ನಿಲ್ಲುವ ಮಾತೆಲ್ಲಿ CM ಸಾಹೇಬ್ರೇ? ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿಲ್ಲ, ಮನೆ ನಿರ್ಮಿಸಿ ಕೊಡಲಿಲ್ಲ, ಬೆಳೆ ಸಮೀಕ್ಷೆ ಮಾಡಲಿಲ್ಲ, ಕೋವಿಡ್ ಮೃತರಿಗೆ ಪರಿಹಾರವಿಲ್ಲ, ಕಾರ್ಮಿಕರಿಗೆ ₹2000 ಕೈ ಸೇರಿಲ್ಲ, ಬೆಲೆ ಏರಿಕೆ ನಿಯಂತ್ರಿಸಲಿಲ್ಲ ಇನ್ಯಾವ ಕೆಲಸ ಮಾಡುತ್ತಿದೆ ನಿಮ್ಮ ಸರ್ಕಾರ ಎಂದು ಟೀಕಾಪ್ರಹಾರ ನಡೆಸಿದೆ.
ತನ್ನ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಕಾಯ್ದೆಯ ಮೂಲ ಆಶಯವನ್ನೇ ರಾಜ್ಯ ಬಿಜೆಪಿ ಸರ್ಕಾರ ಹಾಳುಗೆಡವುತ್ತಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.