ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ ರಾಜಶೇಖರನ್ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಮೋದಿಯನ್ನು ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಗೆ ಹೋಲಿಸಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜಯಭೇರಿಗೆ ಪತ್ರದ ಮೂಲಕ ರಾಜಶೇಖರನ್ ಮೋದಿಗೆ ಅಭಿನಂದಿಸಿದ್ದಾರೆ. ಧರ್ಮ ಮತ್ತು ಜಾತಿಯನ್ನು ಮೀರಿ ಮೋದಿ ಯುವಕರು, ಮಹಿಳೆಯರು ಮತ್ತು ಬಡವರ ಬೆಂಬಲ ಪಡೆದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement
ದೇಶದ ಅಭಿವೃದ್ಧಿಯಲ್ಲಿ ಮಧ್ಯಮ ವರ್ಗದವರನ್ನೂ ಭಾಗಿಯಾಗಿಸಿಕೊಂಡಿರುವ ಪ್ರಧಾನಿ ಮೋದಿಯವರ ಉದ್ದೇಶವನ್ನು ರಾಜಶೇಖರನ್ ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಘೋಷಣೆಗೆ ಹೋಲಿಸಿದ್ದಾರೆ. 1971ರಲ್ಲಿ ವಿರೋಧ ಪಕ್ಷಗಳು ಇಂದಿರಾ ಹಠಾವೋ ಎಂದು ಕರೆ ನೀಡಿದಾಗ ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದು ಕರೆ ನೀಡಿದ್ದರು.
Advertisement
ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ರಾಜಶೇಖರನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಗರೀಬಿ ಹಠಾವೋ ಎಂಬ ಘೋಷಣೆ ನೀಡಿ, ಊಹಿಸಲಾರದಷ್ಟು ಜನಬೆಂಬಲ ಪಡೆದಿದ್ದರು. ನೀವೂ ಕೂಡ ದೇಶದ ಅಭಿವೃದ್ಧಿಯಲ್ಲಿ ಮಧ್ಯಮ ವರ್ಗದ ಜನರನ್ನು ಭಾಗಿಯಾಗಿಸಿಕೊಂಡಿರೋದನ್ನ ಕಾಣಬಹುದು. ನಿಮಗೆ ತಿಳಿದಿರುವಂತೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಕ್ರಾಂತಿಗಳು ನಡೆದಾಗ, ಮಧ್ಯಮ ವರ್ಗದ ಜನ ಸರ್ಕಾರದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂತ ಹೇಳಿದ್ದಾರೆ.
Advertisement
ಇದರ ಜೊತೆಗೆ ಉತ್ತರಾಖಂಡ್ ಹಾಗು ಉತ್ತರಪ್ರದೇಶದಲ್ಲಿ ಬಿಜೆಪಿ ಬಹುಮತ ಗಳಿಸಿದ್ದಕ್ಕೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೂ ಕೂಡ ರಾಜಶೇಖರನ್ ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ಅದರ ಕಾರ್ಯನಿರ್ವಹಣೆಗೆ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ ಎಂದು ಪತ್ರದಲ್ಲಿ ಹೇಳಿದ್ದಾರೆ.
Advertisement
ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯನ್ನು ಎಸ್.ಎಂ ಕೃಷ್ಣ ಕೂಡ ಹೊಗಳಿದ್ದರು.