– ಎತ್ತಿನಹೊಳೆಗೆ ಬಾಗಿನ ಅರ್ಪಣೆ
ಹಾಸನ: ಎತ್ತಿನಹೊಳೆ (Yettinahole Project) ಕುಡಿಯುವ ನೀರಿನ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದರು.
ಸಕಲೇಶಪುರ ತಾಲ್ಲೂಕಿನ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ ಚಾಲನೆ ನೀಡಿದರು. ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದ ಸಿಎಂ ಯೋಜನೆಯನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ಟೇಪ್ ಕತ್ತರಿಸುವ ಮೂಲಕ ಪಂಪ್ ಹೌಸ್ ಉದ್ಘಾಟಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ
ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿಎಂ ಉದ್ಘಾಟಿಸಿರು. ದಶಕಗಳ ಬಹುನಿರೀಕ್ಷೆಯ ಯೋಜನೆಗೆ ಚಾಲನೆ ಸಿಕ್ಕಿದೆ. ಯೋಜನೆ ಉದ್ಘಾಟನೆಗೂ ಮುನ್ನ ಸಿಎಂ ಪೂಜೆ ಸಲ್ಲಿಸಿದರು.
ಯೋಜನೆ ಚಾಲನೆಗೂ ಮುನ್ನ ಸಕಲೇಶಪುರದ ದೊಡ್ಡನಾಗರದಲ್ಲಿ ಹೋಮ ನಡೆಸಲಾಯಿತು. ಯೋಜನೆಯ ಡಂಪಿಂಗ್ ಸ್ಟೇಷನ್‌ನಲ್ಲಿ ಹೋಮ ನಡೆಯಿತು. ಚಾಮುಂಡಿ ಬೆಟ್ಟದ ಶಶಿಶೇಖರ್ ದೀಕ್ಷಿತ್ ಹೋಮ ನಡೆಸಿಕೊಟ್ಟರು. ಇದನ್ನೂ ಓದಿ: ಪಾದಚಾರಿಗಳ ಮೇಲೆ ಹರಿದ ಬೈಕ್ – ನಾಲ್ವರು ಸಾವು
ಸಮಾರಂಭದಲ್ಲಿ ಸಿಎಂ, ಡಿಸಿಎಂಗೆ ಸಚಿವರಾದ ರಾಜಣ್ಣ, ಎಂಬಿ ಪಾಟೀಲ್, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಶಿವಲಿಂಗೇಗೌಡ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಗುಬ್ಬಿ ಶ್ರೀನಿವಾಸ್ ಸೇರಿ ಹಲವರು ಸಾಥ್ ನೀಡಿದರು. ಎತ್ತಿನಹೊಳೆ ಯೋಜನೆಯ ಮೂರನೇ ನೀರೆತ್ತುವ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಲಾಯಿತು.