ನವದೆಹಲಿ: ನೂತನ ಮುಖ್ಯಮಂತ್ರಿಯ (Karnataka CM) ಆಯ್ಕೆ ವಿಚಾರದಲ್ಲಿ ಸಂದಿಗ್ಧತೆ ಮುಂದುವರೆದಿದ್ದು ಇಂದು ಈ ಸಮಸ್ಯೆ ಬಗೆ ಹರಿಯುವ ಸಾಧ್ಯತೆಯಿದೆ.
ಇಂದು ಶಿಮ್ಲಾದಿಂದ ಸೋನಿಯಾ ಗಾಂಧಿ (Sonia Gandhi) ದೆಹಲಿಗೆ ಆಗಮಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇಂದು ಸಂಜೆ ಅಥವಾ ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ (CLP Meeting) ಕರೆದು ನೂತನ ಸಿಎಂ ಹೆಸರನ್ನು ಪ್ರಕಟಿಸುವ ಸಂಭವ ಇದೆ.
ಹೈಕಮಾಂಡ್ ಮಟ್ಟದಲ್ಲಿ ಇಬ್ಬರೂ ನಾಯಕರನ್ನು ಬೆಂಬಲಿಸುವ ನಾಯಕರಿದ್ದಾರೆ. ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಸಿದ್ದರಾಮಯ್ಯ ಪರವಾಗಿದ್ದರೆ ಪ್ರಿಯಾಂಕಾ ವಾದ್ರಾ ಡಿಕೆಶಿ ಪರವಾಗಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ತಟಸ್ಥವಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಸಚಿನ್ ಪೈಲೆಟ್‌ಗೆ ರಾಹುಲ್ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ
ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಜೊತೆ ಮಂಗಳವಾರ ಸತತ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿದ್ದರಾಮಯ್ಯ (Siddaramaiah) 50:50 ಸೂತ್ರಕ್ಕೆ ಒಪ್ಪದೇ ಪೂರ್ಣಾವಧಿ ಸಿಎಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರ ಹಂಚಿಕೆ ಆಗಬಾರದು. ಸಿಎಂ ಘೋಷಣೆಗೂ ಮುನ್ನವೇ ನಿರ್ಧಾರ ಪ್ರಕಟಿಸಬೇಕು ಅಂತ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಯಾರು ಮುಂದೆ ಬಾರದ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಏರಿ ಪಕ್ಷ ಸಂಘಟನೆ ಮಾಡಿದ ಪರಿಣಾಮ ಈ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರಿಗೆ ಸಿಎಂ ಪಟ್ಟ ನೀಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದ ಸಂಪ್ರದಾಯ. ಈ ಕಾರಣಕ್ಕೆ ನನಗೆ ಸಿಎಂ ಪಟ್ಟ ನೀಡಬೇಕೆಂದು ಬಲವಾದ ವಾದವನ್ನು ಡಿಕೆ ಶಿವಕುಮಾರ್(DK Shivakumar) ಮಂಡಿಸಿದ್ದಾರೆ.