ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯಕ್ಕಿಂದು ವೃಶ್ಚಿಕ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದ್ದಾರೆ. ಇದಕ್ಕೂ ಮುನ್ನ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬಿದಿರಳ್ಳಿಯಲ್ಲಿರುವ ಕಬಿನಿ ಜಲಾಶಕ್ಕೂ ಬಾಗಿನ ಕೊಟ್ಟಿದ್ದಾರೆ.
Advertisement
8 ತಿಂಗಳ ಅವಧಿಯಲ್ಲೇ ಬೊಮ್ಮಾಯಿ ಅವರು 2ನೇ ಬಾರಿಗೆ ಬಾಗಿನ ಅರ್ಪಿಸಿದ್ದಾರೆ. ಕೆಆರ್ಎಸ್ ಜಲಾಶಯ ಸಾಮಾನ್ಯವಾಗಿ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿದ್ದರಿಂದ ಒಂದು ವರ್ಷ ಕಾಯಬೇಕಿತ್ತು. ಆದರೆ ಈ ಬಾರಿ ಮೂರು ತಿಂಗಳ ಮುಂಚೆಯೇ ಭರ್ತಿಯಾಗಿದ್ದು, 8 ತಿಂಗಳಲ್ಲೇ 2 ಬಾರಿ ಬಾಗಿನ ಅರ್ಪಿಸುವ ಅವಕಾಶ ಒದಗಿಬಂದಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್ – ಎಲ್ಲಾ 6 ತಂಡಗಳು ಐಪಿಎಲ್ ಫ್ರಾಂಚೈಸಿ ಪಾಲು
Advertisement
Advertisement
ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೂವು, ತಳಿರು ತೋರಣಗಳಿಂದ ಅಲಂಕರಿಸಿ ಕೆಆರ್ಎಸ್ ಹಾಗೂ ಕಬಿನಿ ಜಲಾಶಯದ ಹೊರಾಂಗಣವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ವೃಶ್ಚಿಕ ಶುಭಲಗ್ನದಲ್ಲಿ ಸೀರೆ, ಬೆಲ್ಲ, ಅಕ್ಕಿ, ನವ ಧಾನ್ಯಗಳನ್ನು ಸಮರ್ಪಿಸುವ ಮೂಲಕ ಸಿಎಂ ಬಾಗಿನಕೊಟ್ಟರು. ಇದನ್ನೂ ಓದಿ: DSP ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು
Advertisement
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 6 ಬಾರಿ ಬಾಗಿನ ಬಿಟ್ಟು ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಅತ್ಯಂತ ಕಡಿಮೆ ಅವಧಿಯಲ್ಲೇ 2 ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಸಿಎಂ ಬೊಮ್ಮಾಯಿ ಪಾತ್ರರಾಗಿದ್ದಾರೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ ಜಲಾಶಯ ತುಂಬಿರುವುದರಿಂದ ಹಳೆ ಮೈಸೂರು ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಹಾಗೆಯೇ 2,284 ಗರಿಷ್ಠಮಟ್ಟ ಹೊಂದಿರುವ ಕಬಿನಿ ಜಲಾಶಯ ತುಂಬಿರುವುದೂ ಜನರಲ್ಲಿ ಸಂತಹ ಹೆಚ್ಚಿಸಿದೆ. ಅದರೆ ಜಲಾನಯನ ಪ್ರದೇಶದಲ್ಲಿರುವ ಜನರಿಗೆ ಪ್ರವಾಹದ ಭೀತಿ ಉಂಟುಮಾಡಿದೆ. ಇದನ್ನೂ ಓದಿ: ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು
ಕೆಆರ್ಎಸ್ ಜಲಾಶಯ ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಭರ್ತಿಯಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳ 2ನೇ ವಾರದಲ್ಲೇ ಭರ್ತಿಯಾಗಿದೆ. ಕೆಆರ್ಎಸ್ನ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ 6ನೇ ಬಾರಿಗೆ ಭರ್ತಿಯಾಗಿದೆ. ಈ ಹಿಂದೆ 1980, 2006, 2007, 2009, 2018ರಲ್ಲಿ ಭರ್ತಿಯಾಗಿದೆ.