ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ.
2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಅವರಲ್ಲಿ 52 ಮಂದಿಯ ನೇಮಕಾತಿಯನ್ನು ರದ್ದುಗೊಳಿಸಿ ಜುಲೈ 12ರಂದು ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ RSS ಕಚೇರಿ ಮೇಲೆಯೇ ಭಾರತದ ಬಾವುಟ ಹಾರಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Advertisement
Advertisement
ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ, ಮಣಿರಾಜ ಶೆಟ್ಟಿ, ಕೆ.ವಿ. ನಾಗರಾಜ ಮತ್ತು ರೇವಣಪ್ಪ ಕೋಳಗಿ ಅವರಿಗೆ ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಈ ಬಾರಿ ಬಿಜೆಪಿ ಕಾರ್ಯಕರ್ತರಿಗೇ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಿಂದ ಕಾಣೆಯಾಗಿದ್ದ PUC ವಿದ್ಯಾರ್ಥಿನಿಯರು ಪತ್ತೆ – ಹುಬ್ಬಳ್ಳಿಗೆ ಹೋಗಿದ್ದೇಕೆ ಎಂಬುದೇ ಸಸ್ಪೆನ್ಸ್
Advertisement
ಯಾರಿಗೆ – ಯಾವ ನಿಗಮ ಮಂಡಳಿ?
Advertisement
- ಧರ್ಮಣ್ಣ ದೊಡ್ಡಮನಿ – ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
- ಗುತ್ತಿಗೆನೂರು ವಿರೂಪಾಕ್ಷಗೌಡ-ಕರ್ನಾಟಕ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
- ಕೌಟಿಲ್ಯ ರಘು- ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ (ಮೈಲಾಕ್) ನಿಗಮದ ಅಧ್ಯಕ್ಷ
- ಮಲ್ಲಿಕಾರ್ಜುನ್ ಬಸವಣ್ಣಪ್ಪ ತುಬಾಕಿ- ಮದ್ಯಪಾನ ಸಂಯಮ ಮಂಡಳಿ
- ಕೆಪಿ ವೆಂಕಟೇಶ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
- ದೇವೇಂದ್ರನಾಥ ಕೆ ನಾದ್- ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ
- ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
- ಎಂ.ಕೆ.ಶ್ರೀನಿವಾಸ್ – ವಸ್ತು ಪ್ರದರ್ಶನ ಪ್ರಾಧಿಕಾರ
- ಎಂ.ಕೆ.ವಾಸುದೇವ್- ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
- ಎನ್‌ಎಂ ರವಿನಾರಾಯಣರೆಡ್ಡಿ – ದ್ರಾಕ್ಷಿ ಮತ್ತು ವೈನ್ ಬೋರ್ಡ್
- ಚಂದ್ರಶೇಖರ ಕವಟಗಿ – ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
- ಬಿ.ಸಿ.ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
- ಗೌತಮ್ ಗೌಡ – ರೇಷ್ಮೆ ಉದ್ಯಮಗಳ ನಿಗಮ
- ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
- ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆ
- ಎಂ ಶಿವಕುಮಾರ್ – ಮೃಗಾಲಯ ಪ್ರಾಧಿಕಾರ
- ಎನ್.ಎಂ.ರವಿ ಕಾಳಪ್ಪ – ಜೀವ ವೈವಿಧ್ಯ ಮಂಡಳಿ
- ಎಂ.ವಿ.ತೀರ್ಥರಾಮ – ರೀತ್ಯಾ ಆಡಳಿತ ಮಂಡಳಿ
- ವೆಂಕಟಪ್ಪ – ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ಮಲ್ಲಪ್ಪ – ಕರಕುಶಲ ಅಭಿವೃದ್ಧಿ ನಿಗಮ