ಬೆಂಗಳೂರು: ಮಂಡ್ಯ ದುರಂತದ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಲಾವಿದರ ಸಂಘದಿಂದ ಆಯೋಜಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ. ಅಲ್ಲದೇ ಕಲಾವಿರ ಸಂಘದ ವತಿಯಿಂದ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ನೀಡಲಾವುದು ಎಂದು ತಿಳಿಸಿದರು.
Advertisement
ಅಚಾತುರ್ಯಕ್ಕೆ ಇಷ್ಟು ಬಲಿ..!!
ತುಂಬಾ ದುಃಖವಾಯಿತು..!!
ನಾಲೆಗಳ ಮೇಲೆ ಬಸ್ ಸಂಚಾರ ಅಂತ ಕೇಳಿ ಆಶ್ಚರ್ಯ ಆಯಿತು..!!
ಪೋಲಿಸ್ ಇಲಾಖೆ ಇತ್ತ ಗಮನಹರಿಸಿ..!!
ಈ ಅವಘಡಕ್ಕೆ ಬಸ್ ಮಾಲೀಕ ಜವಾಬ್ದಾರಿ ಹೊತ್ತು ಪರಿಹಾರ ನೀಡಬೇಕು!ಕರ್ನಾಟಕ ಸರ್ಕಾರ ಸೊಕ್ತಕ್ರಮ ಹಾಗು ಪರಿಹಾರ ನೀಡಬೇಕು..!
ಇಂಥ ಅವಘಡ ಮುಂದೆ ಆಗದಂತೆ ಜಾಗೃತಿ ಮೂಡಿಸಬೇಕು! https://t.co/Lk5PdTktok
— ನವರಸನಾಯಕ ಜಗ್ಗೇಶ್ (@Jaggesh2) November 24, 2018
Advertisement
ಕಲಾವಿದರ ಸಂತಾಪ: ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಸ್ಯಾಂಡಲ್‍ವುಡ್ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದು, ನಟ ಯಶ್, ದರ್ಶನ್, ಗಣೇಶ್, ರಾಗಿಣಿ ದ್ವಿವೇದಿ, ಶ್ರೀ ಮುರುಳಿ, ಜಗ್ಗೇಶ್, ಸುಮಲತಾ ಅಂಬರೀಶ್, ಉಪೇಂದ್ರ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.
Advertisement
ಪಾಂಡವಪುರದಿಂದ ಶಾಲಾ ಮಕ್ಕಳು ಹಾಗೂ ಪ್ರಯಾಣಿಕರನ್ನು ಕರೆದುಕೊಂಡು ಮಂಡ್ಯಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಕನಗನಮರಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಮನಕಲಕುವ ವಿಷಯ ತಿಳಿದು ತುಂಬಾ ಬೇಸರವಾಗಿದೆ…. https://t.co/lPJBhZyfnC
— Darshan Thoogudeepa (@dasadarshan) November 24, 2018
Advertisement
ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಬಸ್ ದುರಂತ ನಿಜಕ್ಕೂ ದುರದೃಷ್ಟಕರ.ವಿಧಿಯ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬಗಳಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ.ಮೃತರ ಕುಟುಂಬದ ದುಃಖದಲ್ಲಿ ನಾನೂ ಪಾಲುದಾರನಾಗಿ,ಇಂದು ಬಿಡುಗಡೆಯಾಗಬೇಕಿದ್ದ*ಆರೆಂಜ್*ಚಿತ್ರದ Trailer ನ್ನು ಮುಂದೂಡುತ್ತಿದ್ದೇನೆ pic.twitter.com/KQyTKWdkHX
— Ganesh (@Official_Ganesh) November 24, 2018
Horrendous heart-breaking tragedy in Mandya..have no words , how can any words give comfort to the grieving families in shock ..no compensation can replace lives…when will reckless drivers realise the terrible consequences of their rash actions ? ????????
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) November 24, 2018
ನಾಲೆಯ ಪಕ್ಕದಲ್ಲಿ ಕಲ್ಲುಗಳನ್ನು ನೆಟ್ಟು ತಡೆ ಗೋಡೆಗಳನ್ನು ನಿರ್ಮಿಸದೇ ಇರುವುದೇ ಮಂಡ್ಯದ ಈ ಬಸ್ ದುರಂತಕ್ಕೆ ಕಾರಣ. ದೇವರೇ ನಮ್ಮ ಜನರ, ಅಧಿಕಾರಿಗಳ, ಜನಪ್ರತಿನಿಧಿಗಳ ಈ ನಿರ್ಲಕ್ಷ ಮನೋಭಾವವನ್ನು ನೀಗಿಸಿ ಇನ್ನು ಮುಂದಾದರೂ ವಿವೇಚನೆಯನ್ನು ನೀಡಿ ಮುಂಜಾಗ್ರತೆಯ ಕೆಲಸ ಮಾಡುವಂತಾಗಲಿ ????????????
— Upendra (@nimmaupendra) November 24, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv