ಬೆಂಗಳೂರು: ಇಂದಿನಿಂದ ದೀಪಾವಳಿ ಆರಂಭ. ಮೊದಲ ದಿನವಾದ ಇವತ್ತು ನರಕ ಚರ್ತುದರ್ಶಿ. ರಾಕ್ಷಸ ನರಕಾಸುರನನ್ನ ಮಹಾಕಾಳಿ ವಧೆಗೈದು ಧರ್ಮ ಎತ್ತಿ ಹಿಡಿದ ದಿನ. ಒಂದು ಕಡೆ ಅಗತ್ಯವೇ ಇಲ್ಲದ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇನ್ನೊಂದು ಗಂಟೆಯಲ್ಲಿ ಹೊರಬೀಳಲಿದೆ.
ಎರಡು-ಮೂರು ಗಂಟೆಗಳಲ್ಲಿ ಗಣಿ ನಾಡಿಗೆ ಯಾರು ಧಣಿ, ಶಿವಮೊಗ್ಗದ ಮನೆ ಮಗ ಯಾರು..? ಮಂಡ್ಯದಲ್ಲಿ ಯಾರ ಬಾಯಿಗೆ ಸಕ್ಕರೆ, ವಿರೋಧಿಗಳೇ ಇಲ್ಲದ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಎಷ್ಟು ವೋಟ್‍ನಿಂದ ಗೆಲ್ಲಬಹುದು ಮತ್ತು ಜಮಖಂಡಿಯಲ್ಲಿ ಸಿದ್ದರಾಮಯ್ಯ ವರ್ಚಸ್ಸು ವರ್ಕೌಟ್ ಆಯ್ತಾ ಅನ್ನೋ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ.
ಐದೂ ಕ್ಷೇತ್ರಗಳಲ್ಲಿರುವ ನಮ್ಮ ಪ್ರತಿನಿಧಿಗಳು ಕ್ಷಣ ಕ್ಷಣದ ಇಂಚಿಂಚೂ ಮಾಹಿತಿಯನ್ನ ನಿಮಗೆ ಕೊಡಲಿದ್ದಾರೆ. ಯಾರಿಗೆ ಎಷ್ಟು ವೋಟ್, ಯಾರಿಗೆ ಎಷ್ಟರ ಲೀಡ್ ಅನ್ನೋ ಕ್ಷಣಕ್ಷಣದ ಬೆಳವಣಿಗೆಯ ವಿವರಣೆಯನ್ನ ನಿಮ್ಮ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತದೆ.
ಏಳು ತಿಂಗಳ ಹಿಂದೆಯಷ್ಟೇ ಮುಗಿದಿರೋ ಅಸೆಂಬ್ಲಿ ಚುನಾವಣೆ ಮತ್ತು ಇನ್ನೇಳು ತಿಂಗಳಲ್ಲಿ ನಡೆಯೋ ಲೋಕಸಭಾ ಮಹಾ ಚುನಾವಣೆಯ ಹೊಸ್ತಿಲಲ್ಲಿ ನಡೆದಿರೋ ಉಪ ಚುನಾವಣಾ ಫಲಿತಾಂಶ ತನ್ನದೇ ರಾಜಕೀಯ ಪರಿಣಾಮಗಳನ್ನ ಹೊಂದಿದೆ.
ಉಪಕದನದ ಫಲಿತಾಂಶದ ಎಫೆಕ್ಟ್ ಏನ್ ಆಗಬಹುದು?
– ಈ ಪಂಚ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಇಮೇಜ್ ನಿರ್ಧಾರ
– ಸಾಲಮನ್ನಾ ಸೇರಿದಂತೆ ಸಮ್ಮಿಶ್ರ ಸರ್ಕಾರದ ನಿರ್ಧಾರಗಳಿಗೆ ಜನೋತ್ತರ
– ಏಳು ತಿಂಗಳ ಹರೆಯದ ಸಮ್ಮಿಶ್ರ ಸರ್ಕಾರದ ಬಗ್ಗೆ ಜನಾಭಿಪ್ರಾಯ
– 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಹಣೆಬರಹ ನಿರ್ಧಾರ
– ಮಹಾ ಚುನಾವಣೆಗೂ ಈ ಉಪ ಚುನಾವಣಾ ಫಲಿತಾಂಶವೇ ಮುನ್ನುಡಿ
– ಬಿಜೆಪಿ ಪಾಲಿಗೆ ನಿರ್ಣಾಯಕ, ಬಿಜೆಪಿಯಲ್ಲಿ ಈ ಫಲಿತಾಂಶದಿಂದ ನಾಯಕತ್ವ ನಿರ್ಧಾರ
– ಬಿಜೆಪಿಯ ದಕ್ಷಿಣದ ಬಾಗಿಲು ಮುಚ್ಚಿಹೋಗುತ್ತಾ, ತೆರೆಯುತ್ತಾ ಅನ್ನೋದು ತೀರ್ಮಾನ
ಚುನಾವಣೆಯ ಕ್ಷಣ ಕ್ಷಣ ಮಾಹಿತಿಗಾಗಿ ಪಬ್ಲಿಕ್ ಟಿವಿ ನೋಡಲು ಇಲ್ಲಿ ಕ್ಲಿಕ್ ಮಾಡಿ… https://publictv.in/live
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv